ಮಂಗಳೂರು ಫೆಬ್ರವರಿ 24: ಮಹಿಳೆಯೊಬ್ಬರು ಮೊಬೈಲ್ ಗೆ ಬಂದ ಆನ್ಲೈನ್ ಇನ್ವೆಸ್ಟನೆಂಟ್ ಆಫರ್ ನಂಬಿ ಬರೋಬ್ಬರಿ 19 ಲಕ್ಷ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

37 ವರ್ಷ ಪ್ರಾಯದ ಮಹಿಳೆಯೊಬ್ಬರ ಮೊಬೈಲ್ ಗೆ ಇನ್ ವೆಸ್ಟಮೇಂಟ್ ಆಫರ್ ಆಗಿ ಜಾಹೀರಾತು ಬಂದಿದೆ.
ಬಳಿಕ ಮೊಬೈಲ್ ನಿಂದ ಗೂಗಲ್ ನಲ್ಲಿ SOFTONIC WEBSITE ನಲ್ಲಿ ಸರ್ಚ್ ಮಾಡಿ ನೋಡಲಾಗಿ ಇದರಿಂದ APK ಫೈಲ್ ಡೌನ್ ಲೋಡ್ ಮಾಡಿದ್ದು ಬಳಿಕ SOFTONIC APP ಬಳಸಿ ಬ್ಯಾಂಕ್ ಖಾತೆಯ ವಿವರವನ್ನು ನೀಡಿ ನೊಂದಾಯಿಸಿಕೊಂಡಿದ್ದಾರೆ.
ಆ್ಯಪ್ ಮುಖಾಂತರ ಎದುರು ತೆರೆಯುವ ಬೇರೆ ಬೇರೆ ಕಂಪೆನಿಗಳಾದ (Wing Birds, Chamundi Enterprisess) ಹೀಗೆ ಬೇರೆ ಬೇರೆ ಕಂಪೆನಿಗಳಿದ್ದು ಅದರಲ್ಲಿ ಕೆಲವನ್ನು ಸೆಲೆಕ್ಟ್ ಮಾಡಿ ಪಿರ್ಯಾಧಿದಾರರು ತಮ್ಮ ಬಳಿ ಇರುವಂತಹ ಹಣವನ್ನು ಹೂಡಿಕೆಮಾಡಿದ್ದು ಇದರಲ್ಲಿ ತೋರಿಸಿರುವಂತೆ ಕನಿಷ್ಠ ಒಂದು ಲಕ್ಷ ಮೊತ್ತವನ್ನು ಹಾಕಬೇಕಾಗಿತ್ತು. ಈ ಹಿನ್ನಲೆ ಮಹಿಳೆಯ 2024 ಜನವರಿ ತಿಂಗಳಿನಿಂದ ಹಣವನ್ನು 2025 ರ ನವೆಂಬರ್ ವರೆಗೆ ಸುಮಾರು 19,06,166/-ವರೆಗೆ ಹೂಡಿಕೆ ಮಾಡಿದ್ದಾರೆ.
ಅಲ್ಲದೆ ಮಹಿಳೆ 2026 ಜನವರಿ ತಿಂಗಳಿನಲ್ಲಿ ತಾನು ಹೂಡಿಕೆ ಮಾಡಿದ್ದ ಹಣದಿಂದ 1 ಲಕ್ಷ ಹಣವನ್ನು ವಾಪಾಸ್ ಪಡೆದಿದ್ದರು. ಮಹಿಳೆಯ ಕರ್ನಾಟಕ ಬ್ಯಾಂಕ್ ಅಕೌಂಟ್ ನಂಬ್ರ ಬ್ಲಾಕ್ ಮಾಡಿದ್ದು ಈ ವಿಚಾರವಾಗಿ ಬ್ಯಾಂಕ್ ಮುಖಾಂತರ ಮಾಹಿತಿ ಪಡೆದಿದ್ದು ನಂತರ ದಿನಾಂಕ 22-01-2026 ರಂದು ಪಿರ್ಯಾಧಿದಾರರು ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ಹೋಗಿ ಸೈಬರ್ ವಂಚನೆ ಬಗ್ಗೆ ದೂರು ದಾಖಲಿಸಿದ್ದಾರೆ.