DAKSHINA KANNADA
ಉಪ್ಪಿನಂಗಡಿ – ವಿದ್ಯುತ್ ತಂತಿ ತಗುಲಿ ಯುವಕ ಸಾವು

ಉಪ್ಪಿನಂಗಡಿ ಫೆಬ್ರವರಿ 19 :ತೆಂಗಿನ ಕಾಯಿ ಕೀಳುವ ವೇಳೆ ವಿದ್ಯುತ್ ತಂತಿ ತಗುಲಿ ಕೂಲಿ ಕಾರ್ಮಿಕ ಯುವಕ ಸಾವನಪ್ಪಿದ ಘಟನೆ ಉಪ್ಪಿನಂಗಡಿ ಸಮೀಪದ ಮಠ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ದಾವಣಗೆರೆ ಜಗಳೂರು ತಾಲೂಕು ಪಲ್ಲಗಟ್ಟೆ ನಿವಾಸಿ ವೀರಭದ್ರ (29) ಎಂದು ಗುರುತಿಸಲಾಗಿದೆ.
ಕಬ್ಬಿಣದ ರಾಡ್ ನಲ್ಲಿ ತೆಂಗಿನಕಾಯಿ ಕೀಳುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ರಾಡ್ ತಗುಲಿ ಕರೆಂಟ್ ಶಾಕ್ ಹೊಡೆದು ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವೀರಭದ್ರ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಮನೆ ನಿವಾಸಿ ಗುತ್ಯಪ್ಪ ಎಂಬವರ ಮಗನಾಗಿದ್ದು, ತೋಟದ ಕಾರ್ಮಿಕನಾಗಿ ಕುವೆಚ್ಚಾರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆನ್ನಲಾಗಿದೆ.
