LATEST NEWS
ಬಂದರು ಠಾಣೆಗೆ ಬೆಂಕಿ ಹಚ್ಚಲು ಬಂದ ಕಿಡಿಗೇಡಿಗಳ ಮೇಲೆ ಗುಂಡು ಹಾರಿಸಿದ ಪೊಲೀಸರು ಇಬ್ಬರು ಗಂಭೀರ
ಬಂದರು ಠಾಣೆಗೆ ಬೆಂಕಿ ಹಚ್ಚಲು ಬಂದ ಕಿಡಿಗೇಡಿಗಳ ಮೇಲೆ ಗುಂಡು ಹಾರಿಸಿದ ಪೊಲೀಸರು ಇಬ್ಬರು ಗಂಭೀರ
ಮಂಗಳೂರು ಡಿಸೆಂಬರ್ 19: ಬಂದರು ಠಾಣೆಗೆ ಬೆಂಕಿ ಹಚ್ಚಿ ಪೊಲೀಸ್ ಸಿಬ್ಬಂದಿಯ ಹತ್ಯೆಗೆ ಯತ್ನಿಸಿದ ಹಿನ್ನಲೆ ಉದ್ರಿಕ್ತರ ಮೇಲೆ ಪೈರಿಂಗ್ ಮಾಡಲಾಗಿದ್ದು ಉದ್ರಿಕ್ತರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಡಾ. ಪಿ.ಎಸ್ ಹರ್ಷ ತಿಳಿಸಿದ್ದಾರೆ.
ಬಂದರು ಠಾಣೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸುಮಾರು 7 ಸಾವಿರದಷ್ಟು ಉದ್ರಿಕ್ತರು ಮಾರಾಕಾಯುಧಗಳೊಂದಿಗೆ ಬಂದರು ಠಾಣೆಗೆ ದಾಳಿ ನಡೆಸಿದ್ದು, ಬಂದರು ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಅಲ್ಲದೆ ಠಾಣೆ ಒಳಗೆ ಕಲ್ಲು,ಬಾಟಲಿ ತೂರಾಟ ಮಾಡಿ, ಠಾಣೆಯ ಸಿಬ್ಬಂದಿ ಹತ್ಯೆಗೆ ಯತ್ನ ಮಾಡಿದ್ದಾರೆ ಎಂದು ತಿಳಿಸಿದರು.
ಈ ಹಿನ್ನಲೆಯಲ್ಲಿ ಉದ್ರಿಕ್ತರನ್ನು ಚದುರಿಸಲು ಅನಿವಾರ್ಯವಾಗಿ ಫೈರಿಂಗ್ ಮಾಡಲಾಗಿದ್ದು ಈ ಘಟನೆಯಲ್ಲಿ ಇಬ್ಬರು ಉದ್ರಿಕ್ತರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಉದ್ರಿಕ್ತರೊಂದಿಗೆ ನಡೆದ ಗಲಭೆಯಲ್ಲಿ 20 ಮಂದಿ ಪೊಲೀಸರಿಗೆ ಗಾಯವಾಗಿದೆ. ಅದರಲ್ಲಿ 8 ಮಂದಿ ಪೊಲೀಸರಿಗೆ ತೀವ್ರ ತರದ ಗಾಯವಾಗಿದ್ದು, ಡಿಸಿಪಿ ಕ್ರೈಮ್ ಅವರ ಕೈ ಯ ಎಲುಬು ಕಟ್ ಆಗಿದ್ದು, ಮತ್ತೋರ್ವ ಡಿಸಿಪಿಯ ಕಾಲಿನ ಎಲುಬು ತುಂಡಾಗಿದೆ ಎಂದು ತಿಳಿಸಿದರು. ಕಿಡಿಗೇಡಿಗಳು ಮತ್ತೆ ಗಲಭೆಗೆ ಮುಂದಾದರೆ ಸೆಕ್ಷನ್144 ರ ಕಾನೂನನ್ನು ಸಂಪೂರ್ಣ ಬಲ ಪ್ರಯೋಗ ಮಾಡುತ್ತೇವೆ ಎಂದು ಎಚ್ಚರಿಸಿದರು.