LATEST NEWS
ಡಿಸೆಂಬರ್ 22 ರವರೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ಪ್ಯೂ

ಡಿಸೆಂಬರ್ 22 ರವರೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ಪ್ಯೂ
ಮಂಗಳೂರು ಡಿಸೆಂಬರ್ 20:ನಿನ್ನೆ ಪೌರತ್ವ ತಿದ್ದುಪಡಿ ಮಸೂಗೆ ವಿರೋಧಿಸಿ ನಡೆದ ಹಿಂಸಾಚಾರ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸೆಂಬರ್ 22 ರ ಮಧ್ಯರಾತ್ರಿ 12 ರವರೆಗೆ ಕರ್ಪ್ಯೂ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ತಿಳಿಸಿದ್ದಾರೆ.
ಕರ್ಪ್ಯೂ ಜಾರಿ ಹಿನ್ನಲೆ ಮಂಗಳೂರು ನಗರದಾದ್ಯಂತ ಬಿಗಿ ಪೊಲಿಸ್ ಸರ್ಪಗಾವಲು ಹಾಕಲಾಗಿದೆ. ಖಾಸಗಿ – ಸರ್ಕಾರಿ ಬಸ್ಸುಗಳು ವಾಹನ ಒಡಾಟಗಳು ಸ್ಥಗಿತಗೊಂಡಿವೆ.ಶಾಲಾ – ಕಾಲೇಜುಳಿಗೆ ಈಗಾಗಲೇ ರಜೆ ಘೋಷಣೆ ಮಾಡಲಾಗಿದೆ. ಅಂಗಡಿ ಮುಂಗಟ್ಟು ಬಂದಾಗಿವೆ. ಬೇರೆ ಬೇರೆ ಊರುಗಳಿಂದ ಬಂದ ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ನಗರಕ್ಕೆ ಬರುತ್ತಿರುವ ಬಸ್ ಗಳನ್ನು ಹೊರವಲಯದಲ್ಲಿಯೇ ನಿಲ್ಲಿಸಲಾಗುತ್ತಿದೆ. ವಾಣಿಜ್ಯ ಪ್ರದೇಶಗಳಲ್ಲಿ ಜನಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು, ಉಳಿದ ಕಡೆಗಳಲ್ಲಿ ವಿರಳವಾದ ಜನ ಸಂಚಾರವಿದೆ. ಪೊಲೀಸರು ಧ್ವನಿವರ್ಧಕಗಳಲ್ಲಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಯಾರು ಮನೆಯಿಂದ ಹೊರಗೆ ಬರಬಾರದು’ ಎಂದು ಪ್ರಕಟಿಸುತ್ತಿದ್ದಾರೆ.
ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳು ಮೆಡಿಕಲ್ ಶಾಪ್ಗಳು ಬಂದಾಗಿವೆ. ಆಸ್ಪತ್ರೆಗಳಲ್ಲೂ ಹೊರರೋಗಿಗಳ ಸೇವೆ ಸಂಪೂರ್ಣ ಬಂದ್ ಆಗಿದ್ದು, ತುರ್ತುಸೇವೆಗಳು ಮಾತ್ರ ಲಭ್ಯವಿದೆ. ಡಿಸೆಂಬರ್ 22 ರ ವರೆಗೆ ಕರ್ಫ್ಯೂ ವಿಧಿಸಲಾಗಿದ್ದು ಹೊರಗಿನಿಂದ ಹೆಚ್ಚಿನ ಪೊಲೀಸ್ ಬಲವನ್ನು ನಗರಕ್ಕೆ ಕರೆಸಲಾಗುತ್ತಿದ್ದು, ಸದ್ಯಕ್ಕೆ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.