LATEST NEWS
ಹಸಿದವರು ಮತ್ತು ಹಳಸಿದವರ ಸರಕಾರ ಹೆಚ್ಚು ದಿನ ಬಾಳಿಕೆ ಬರಲ್ಲ – ಸಿ.ಟಿ ರವಿ
ಹಸಿದವರು ಮತ್ತು ಹಳಸಿದವರ ಸರಕಾರ ಹೆಚ್ಚು ದಿನ ಬಾಳಿಕೆ ಬರಲ್ಲ – ಸಿ.ಟಿ ರವಿ
ಮಂಗಳೂರು ಜೂನ್ 4: ರಾಜ್ಯದಲ್ಲಿರುವ ಕಾಂಗ್ರೇಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ಹಸಿದವರು ಮತ್ತು ಹಳಸಿದವರ ಸರಕಾರವಾಗಿದೆ ಎಂದು ಬಿಜೆಪಿ ಮುಖಂಡ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ಅಧಿಕಾರಕ್ಕಾಗಿ ಹಸಿದ ಜೆಡಿಎಸ್ ಹಳಸಿದ ಕಾಂಗ್ರೆಸ್ ಜೊತೆ ಸೇರಿ ಸರಕಾರ ನಡೆಸುತ್ತಿದ್ದು, ಜನಾದೇಶ ಕಳಕೊಂಡವರು, ಜನಾದೇಶಗಳಿಸದವರ ಜೊತೆ ಸೇರಿ ಅಧಿಕಾರಕ್ಕಾಗಿ ಸಾಂದರ್ಭಿಕ ಶಿಶು ಹುಟ್ಟಿಸಿಕೊಂಡಿದ್ದಾರೆ ಎಂದರು. ಈ ರೀತಿ ಜನ ವಿರೋಧಿಯಾಗಿರುವ ಸರಕಾರ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ಎಂದು ಹೇಳಿದರು.
ಗುಂಡು, ತುಂಡಿನ ಪಾರ್ಟಿ ಸಂಸ್ಕೃತಿ ವಿಧಾನ ಪರಿಷತ್ ಚುನಾವಣೆಗೂ ನುಸುಳಿದ್ದು, ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಸಿ,ಟಿ ರವಿ ಆರೋಪಿಸಿದ್ದಾರೆ. ಶಿವಮೊಗ್ಗದಲ್ಲಿ ಶಿಕ್ಷಕರಿಗೆ ಪಾರ್ಟಿ ನೀಡಿದ್ದಾಗ ದಾಳಿ ನಡೆದಿತ್ತು, ದಾಳಿ ಸಂದರ್ಭದಲ್ಲಿ ಅಭ್ಯರ್ಥಿ ಸೇರಿ ಮುಖಂಡರು ಓಡಿ ಪರಾರಿಯಾಗಿದ್ದರು.ಈ ಬಗ್ಗೆ ವಿಧಾನ ಪರಿಷತ್ತಿನ ಜಾಗೃತ ಮತದಾರರು ಜವಾಬ್ದಾರಿಯಿಂದ ಮತ ಚಲಾಯಿಸಬೇಕು ಎಂದು ಹೇಳಿದರು.
2019ರಲ್ಲಿ ಮೋದಿ ಸರಕಾರ ಮತ್ತೆ ಬರದಂತೆ ಷಡ್ಯಂತ್ರ ನಡೆಯುತ್ತಿದ್ದು, ಅಂತಾರಾಷ್ಟ್ರೀಯ ಷಡ್ಯಂತ್ರದ ಭಾಗವಾಗಿ ಮೋದಿ ವಿರೋಧಿಗಳು ಒಂದಾಗಿದ್ದಾರೆ ಎಂದು ಆರೋಪಿಸಿದ ಸಿ.ಟಿ ರವಿ. ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ಬಲಿಷ್ಠವಾಗುತ್ತೆ, ಈ ಹಿನ್ನಲೆಯಲ್ಲಿ ದೇಶದ ಪ್ರಗತಿಯನ್ನು ತಡೆಯುವುದಕ್ಕಾಗಿ ಈ ಎಲ್ಲ ಶಕ್ತಿಗಳು ಒಂದಾಗುತ್ತಿದ್ದಾರೆ ಎಂದು ಹೇಳಿದರು.