LATEST NEWS
ಮನೆ ಮಂದಿ ಜೊತೆಗೆ ಓಡನಾಟ ಬೆಳೆಸಿಕೊಂಡ ಕಾಗೆ ಮನೆಮಂದಿ ಕೈ ತುತ್ತೆ ಅದಕ್ಕೆ ಆಹಾರ
ಮನೆ ಮಂದಿ ಜೊತೆಗೆ ಓಡನಾಟ ಬೆಳೆಸಿಕೊಂಡ ಕಾಗೆ ಮನೆಮಂದಿ ಕೈ ತುತ್ತೆ ಅದಕ್ಕೆ ಆಹಾರ
ಉಡುಪಿ ನವೆಂಬರ್ 19: ಒಂಟಿ ಕಾಗೆಯೊಂದು ಮನೆ ಮಂದಿಯೊಂದಿಗೆ ಒಡನಾಟ ಬೆಳಸಿಕೊಂಡಿದ್ದು ಮನೆ ಮಂದಿ ಕೈ ತುತ್ತನ್ನು ದಿನವೂ ಬಂದು ಸವಿಯುತ್ತಿದೆ ಈ ಕಾಗೆ, ಮನುಷ್ಯನೊಂದಿಗೆ ಒಡನಾಟ ಇಟ್ಟುಕೊಂಡಿರುವ ಕಾಗೆ ಅಚ್ಚರಿ ಮೂಡಿಸಿದೆ.
ಕಾಪು ಮೂಲದ ಶ್ರೀಮತಿ ಆಶಾ, ಶೇಖರ ದೇವಾಡಿಗ ದಂಪತಿಗಳು ಮುಂಬೈ ಜೋಗೇಶ್ವರದಲ್ಲಿ ನೆಲೆ ಕಂಡಿದ್ದಾರೆ. ಇವರ ಮನೆಗೆ ಕಳೆದ ಒಂದು ವರ್ಷಗಳಿಂದ ಒಂಟಿ ಕಾಗೆಯೊಂದು ನಿತ್ಯವು ಬರಲಾರಂಭಿಸಿದೆ. ಇದೇನು ಸಾಕಿದ ಕಾಗೆಯಲ್ಲ. ಪರಿಸರದ ಮಡಿಲಲ್ಲಿ ವಾಸವಾಗಿರುವ ಕಾಗೆಯಾಗಿದೆ.
ಈ ಕಾಗೆ ಅಡಿಗೆ ಮನೆಯೊಳಗೆ ಭಯ ಪಡದೆ ತಾನಾಗಿಯೇ ಪ್ರವೇಶ ಪಡೆಯುತ್ತದೆ. ಮನೆ ಮಂದಿ ನೀಡಿದ ಕೈ ತುತ್ತು ಸವಿಯುತ್ತದೆ. ಮೈ ಸವರಿದರೆ ಖುಷಿ ಪಡುತ್ತದೆ. ಮಾತಿಗೂ ಸ್ಪಂದಿಸುತ್ತದೆ. ಬೆಳಿಗ್ಗಿನ ಜಾವದಲ್ಲಿ ಸರಿಯಾದ ಸಮಯಕ್ಕೆ ಮನೆಗೆ ಬರುವ ಈ ಕಾಗೆಗೆ ಮನೆ ಮಂದಿಯ ಕೈ ತುತ್ತೆ ಆಗ ಬೇಕಂತೆ, ಆಹಾರ ನೀಡಲು ತಡ ಮಾಡಿದರೆ ಕಾ..ಕಾ ಎಂದು ಬೊಬ್ಬಿಡುತ್ತಲೇ ಇರುತ್ತದೆಯಂತೆ.
ಆಹಾರ ನೀಡಿದಾಗಲೇ ಕಾಗೆಯು ಕೂಗಾಟವನ್ನು ನಿಲ್ಲಿಸುತ್ತದೆಯಂತೆ, ಮನುಷ್ಯ ಸೇವಿಸುವ ಎಲ್ಲಾ ಆಹಾರ, ಮತ್ತು ಧಾನ್ಯಗಳನ್ನು ಈ ಕಾಗೆ ಸೇವಿಸುತ್ತದೆ. ಉದರ ಹಸಿವು ನಿಗಿಸಿಕೊಂಡ ಬಳಿಕ ಪರಿಸರದಲ್ಲಿಯೇ ಕಾಗೆಯ ಬದುಕು ಸಾಗುತ್ತಿದೆ.