Connect with us

    LATEST NEWS

    ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಬಿರುಕು….!!

    ಬಂಟ್ವಾಳ ಅಕ್ಟೋಬರ್ 09 :ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಪಾಣೆ ಮಂಗಳೂರಿನ ನೇತ್ರಾವತಿ ಹಳೆಯ ಉಕ್ಕಿನ ಸೇತುವೆಯ ಮಧ್ಯೆ ರವಿವಾರ ಬಿರುಕು ಕಾಣಿಸಿಕೊಂಡಿಸಿದೆ.


    ಪಾಣೆಮಂಗಳೂರು ಕಡೆಯಿಂದ ಬರುವಾಗ ಸುಮಾರು ನಾಲ್ಕು ಪಿಲ್ಲರ್ ಗಳ ಪೈಕಿ ಬಿರುಕು ಕಾಣಿಸಿಕೊಂಡಿದೆ. ಸ್ಥಳೀಯ ನಿವಾಸಿ ಮಹಮ್ಮದ್ ಮತ್ತು ಅವರು ಸ್ನೇಹಿತರು ಪಾಣೆಮಂಗಳೂರು ಕಡೆಯಿಂದ ಗೂಡಿನ ಬಳಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಬರುವ ವೇಳೆ ಬಿರುಕು ಬಿಟ್ಟ ಬಗ್ಗೆ ಕಾಣಿಸಿಕೊಂಡಿದೆ. ಕೂಡಲೇ ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಕೆಲ ಹೊತ್ತಿನ ತನಕ ಸೇತುವೆಯಲ್ಲಿ ನಿಂತುಕೊಂಡು ವಾಹನಸವಾರರಿಗೆ ನಿಧಾನವಾಗಿ ಚಲಿಸುವಂತೆ ಕೋರಿದ್ದಾರೆ.


    ಸೇತುವೆಯ ಮೇಲಿನ ರಸ್ತೆಯಲ್ಲಿ ಬಿರುಕು ಕಂಡುಬಂದಿದ್ದು, ಇದು ಸೇತುವೆಯ ಬಿರುಕೇ ಅಥವಾ ಮೇಲಿನ ರಸ್ತೆಯ ಭಾಗದಲ್ಲಿ ಮಾತ್ರ ಬಿರುಕು ಕಂಡುಬಂದಿದೆಯೇ ಎಂಬುದು ಖಚಿತಗೊಂಡಿಲ್ಲ. ಈ ಕುರಿತು ಸಂಬಂಧಪಟ್ಟ ತಜ್ಞರೇ ಪರಿಶೀಲನೆ ನಡೆಸಿ ವರದಿ ನೀಡಬೇಕಿದೆ.
    ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಗೊಂಡಿರುವ ಈ ಸೇತುವೆಯಲ್ಲಿ ಈ ಹಿಂದೆಯೇ ಬಿರುಕು ಕಾಣಿಸಿಕೊಂಡು ಬಳಿಕ ಘನ ವಾಹನಗಳ ಸಂಚಾರ ಅಪಾಯಕಾರಿ ಎಂಬ ವರದಿ ನೀಡಲಾಗಿತ್ತು. ಆದರೆ ಕಾಲಕ್ರಮೇಣ ಘನ ವಾಹನಗಳು ಕೂಡ ಸಂಚಾರ ನಡೆಸುತ್ತಿದ್ದವು.
    ಇದೀಗ ಮತ್ತೆ ಸೇತುವೆಯಲ್ಲಿ ಬಿರುಕಿನ ಮಾದರಿ ಕಂಡುಬಂದಿ ರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ತಜ್ಞರು ಪರಿಶೀಲಿಸಿ ವರದಿ ನೀಡಿದ ಬಳಿಕ ಜನರ ಗೊಂದಲ ನಿವಾರಣೆಯಾಗಬೇಕಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *