LATEST NEWS
ಕೋಝಿಕ್ಕೋಡ್ – ದೇವಸ್ಥಾನದ ಉತ್ಸವ ವೇಳೆ ಸಿಪಿಎಂ ಮುಖಂಡನ ಬರ್ಬರ ಕೊಲೆ

ಕೋಝಿಕ್ಕೋಡ್ ಫೆಬ್ರವರಿ 23 : ಕೋಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿಯಲ್ಲಿ ಶುಕ್ರವಾರ ರಾತ್ರಿ ದೇವಸ್ಥಾನದ ಉತ್ಸವದ ವೇಳೆ ಸಿಪಿಎಂ ಮುಖಂಡನನ್ನು ಕಡಿದು ಹತ್ಯೆ ಮಾಡಲಾಗಿದೆ. ಪೆರುವತ್ತೂರಿನ ಚೆರಿಯಪುರಂ ದೇವಸ್ಥಾನದ ಆವರಣದಲ್ಲಿ ಸಿಪಿಎಂನ ಕೊಯಿಲಾಂಡಿ ಕೇಂದ್ರ ಸ್ಥಾನೀಯ ಸಮಿತಿ ಕಾರ್ಯದರ್ಶಿ ಪಿವಿ ಸತ್ಯನಾಥನ್ (62) ಅವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ವರದಿಗಳ ಪ್ರಕಾರ, ಉತ್ಸವದ ಅಂಗವಾಗಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಾಗ ರಾತ್ರಿ 10 ಗಂಟೆ ಸುಮಾರಿಗೆ ಸತ್ಯನಾಥನ್ ಮೇಲೆ ದಾಳಿ ನಡೆದಿದೆ. ಬೆನ್ನು ಮತ್ತು ಕತ್ತಿನ ಮೇಲೆ ಹಲ್ಲೆಗೊಳಗಾಗಿದ್ದ ಸತ್ಯನಾಥನ್ ಕೊಯಿಲಾಂಡಿಯ ತಾಲೂಕು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೋಝಿಕ್ಕೋಡ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗುವುದು. ಕೊಯಿಲಾಂಡಿಯಲ್ಲಿ ಶುಕ್ರವಾರ ಹರತಾಳ ಘೋಷಿಸಲಾಗಿದೆ.
