DAKSHINA KANNADA
ಚುನಾವಣಾ ಪ್ರಚಾರ ವೇಳೆ ಸಿಪಿಎಂ ಗೂಂಡಾಗಳಿಂದ ಕಿರುಕುಳ – ಕಾಸರಗೋಡು ಬಿಜೆಪಿ ಅಭ್ಯರ್ಥಿ ಎಂ ಎಲ್ ಅಶ್ವಿನಿ ಆರೋಪ
ಕಾಸರಗೋಡು ಎಪ್ರಿಲ್ 22: ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ಎಲ್ ಅಶ್ವಿನಿ ಅವರ ಪ್ರಚಾರ ವಾಹನಕ್ಕೆ ಸಿಪಿಎಂ ಕಾರ್ಯಕರ್ತರು ತಡೆ ಒಡ್ಡಿದ ಘಟನೆ ಪಡಣ್ಣ ಕಡಪ್ಪುರಂನಲ್ಲಿ ನಡೆದಿದ್ದು, ಘಟನೆ ಕುರಿತು ಬಿಜೆಪಿ ಅಭ್ಯರ್ಥಿ ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದು, ಸೋಲಿನ ಭೀತಿಯಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತ್ರಿಕರಿಪುರ ಮಂಡಲದ ವಲಿಯಪರಂಬ, ಪಡಣ್ಣ ಕಡಪ್ಪುರಂನಲ್ಲಿ ಬಿಜೆಪಿ ಪ್ರಚಾರದ ವಾಹನವನ್ನು ಸಿಪಿಎಂ ಕಾರ್ಯಕರ್ತರು ತಡೆದು ಪ್ರಚಾರ ಮಾಡದಂತೆ ತಡೆದಿದ್ದಾರೆ. ಈ ಕುರಿತಂತೆ ಮಾತನಾಡಿದರುವ ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಿಪಿಎಂ ಕಾರ್ಯಕರ್ತರು ವಾಹನವನ್ನು ತಡೆದು ನಿಲ್ಲಿಸಿದ್ದಲ್ಲದೆ ಸಿಪಿಎಂ ಕಾರ್ಯಕರ್ತರು ನನ್ನ ಪಿಎ ಹತ್ತಿರ ನನ್ನ ವಿರುದ್ದ ಅಸಭ್ಯ ಪದಗಳನ್ನು ಬಳಸಿ ಮಾತನಾಡಿದ್ದಾನೆ. ಅಲ್ಲದೆ ಪ್ರಚಾರ ಮಾಡದಂತೆ ತಡೆದಿದ್ದಾರೆ ಎಂದು ಆರೋಪಿಸಿದರು.
ನನ್ನ ಪ್ರಚಾರವನ್ನು ಅಡ್ಡಿಪಡಿಸುವ ಮತ್ತು ನಮ್ಮ ಧ್ವನಿಯನ್ನು ಮೌನಗೊಳಿಸುವ ಈ ಹೇಡಿತನದ ಪ್ರಯತ್ನದ ಹೊರತಾಗಿಯೂ, ನಮ್ಮ ಚುನಾವಣಾ ಪ್ರಚಾರವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೆ ಎಲ್ಲಿ ಬೇಕಾದರೂ ಮತ ಕೇಳುವ ಹಕ್ಕಿದೆ ಮತ್ತು ಆ ಹಕ್ಕನ್ನು ಹತ್ತಿಕ್ಕುವ ಯಾವುದೇ ಪ್ರಯತ್ನಗಳ ವಿರುದ್ಧ ನಾವು ಹೋರಾಡುತ್ತೇವೆ ಎಂದ ಅವರು ನಾನು ಗೆಲುವ ಸಾಧಿಸುತ್ತೇನೆ ಎಂಬ ಹಿನ್ನಲೆ ನನ್ನ ಮೇಲೆ ದಾಳಿ ಮಾಡಲು ಯತ್ನಿಸಿದ್ದು, ಮಹಿಳೆಯಾಗಿ ನಾನು ಈ ಎಲ್ಲಾ ಅಡೆತಡೆಗಳನ್ನು ಎದುರಿಸಲು ಸಿದ್ದ ಎಂದು ಹೇಳಿದರು.