LATEST NEWS
ಜಾನುವಾರು ಸಾಗಾಣಿಕೆ ನಿಷೇಧ ವಾಪಾಸ್…!!
ಮಂಗಳೂರು ಫೆಬ್ರವರಿ 18: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜಾನುವಾರು ಸಾಗಾಣಿಕೆ ಸಂಬಂಧಿಸಿ ಹೇರಲಾಗಿದ್ದ ನಿಷೇಧವನ್ನು ಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಯಾದ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
348 ಗ್ರಾಮಗಳಲ್ಲಿನ 7,036 ಜಾನುವಾರಗಳಲ್ಲಿ ಚರ್ಮ ಗಂಟು ರೋಗ ಕಂಡುಬಂದಿತ್ತು.ಅಲ್ಲದೆ ಈವರೆಗೆ 397 ಜಾನುವಾರುಗಳು ಮರಣ ಹೊಂದಿತ್ತು. ಈ ಹಿನ್ನಲೆಯಲ್ಲಿ 2023ನೇ ಫೆ.15ರ ವರೆಗೆ 2,26,801 ಜಾನುವಾರುಗಳಿಗೆ ಚರ್ಮ ಗಂಟು ರೋಗ ನಿರೋಧಕ ಲಸಿಕೆ ಹಾಕಲಾಗಿತ್ತು.
ಒಂದು ವಾರದಿಂದ ಜಿಲ್ಲೆಯಲ್ಲಿ ಹೊಸ ಪ್ರಕರಣ ಕಂಡು ಬಂದಿಲ್ಲ, ರೋಗವು ನಿಯಂತ್ರಣಕ್ಕೆ ಬಂದ ಕಾರಣ ಜಾನುವಾರು ಸಾಗಾಣಿಕೆ ನಿಷೇಧ ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.