LATEST NEWS
ಮಾರಕಾಸ್ತ್ರಗಳಿಂದ ತೋರಿಸಿ ದನಗಳ್ಳತನ ಮಾಡುತ್ತಿದ್ದ ಕುಖ್ಯಾತ ದನಗಳ್ಳರ ಬಂಧನ

ಮಾರಕಾಸ್ತ್ರಗಳಿಂದ ತೋರಿಸಿ ದನಗಳ್ಳತನ ಮಾಡುತ್ತಿದ್ದ ಕುಖ್ಯಾತ ದನಗಳ್ಳರ ಬಂಧನ
ಮಂಗಳೂರು ಜುಲೈ 27: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ದನಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಬಂಟ್ವಾಳ ನಿವಾಸಿ ಇಮ್ರಾನ್ (27) ಹಾಗು ಬಜಪೆ ನಿವಾಸಿ ಉಮ್ಮರ್ ಫಾರೂಕ್ (32) ಎಂದು ಗುರುತಿಸಲಾಗಿದೆ.
ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದೇ ಜುಲೈ 17 ರಂದು ಮೂಡಶೆಡ್ಡೆಯ ಬೈಲ್ ಎಂಬಲ್ಲಿ ದನಗಳ್ಳತನ ನಡೆದಿತ್ತು.

ಬೈಲ್ ನಿವಾಸಿ ಪುರುಷೋತ್ತಮ ಎಂಬವರ ಮನೆಗೆ ತಡರಾತ್ರಿ ನುಗ್ಗಿದ ದುಷ್ಕರ್ಮಿಗಳ ತಂಡ ಮನೆಯ ಮಂದಿಗೆ ಮಾರಕಾಸ್ತ್ರ ಗಳಿಂದ ಬೆದರಿಸಿ ಹಟ್ಟಿಯಲ್ಲಿದ್ದ 2 ದನಗಳನ್ನುಕಾರಿಗೆ ಎತ್ತಿಹಾಕಿ ಅಪಹರಿಸಿತ್ತು. ಈ ಕುರಿತು ಕಾವೂರು ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.