LATEST NEWS
ಕೋವಿಡ್ ರಕ್ಷಣಾ ಕವಚ ಧರಿಸಿದ ಮಂಗಳೂರು ಸಿಟಿ ಬಸ್ ಕಂಡಕ್ಟರ್….!!

ಬಸ್ ಗಳಲ್ಲಿ ಕೊರೊನಾದ ಮುಂಜಾಗೃತೆ
ಮಂಗಳೂರು ಜೂ.5: ಮಂಗಳೂರಿನಲ್ಲಿ ಕೊರೊನಾ ಲಾಕ್ ಡೌನ್ ನಡುವೆ ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಕೊರೊನಾ ಪ್ರಕರಣಗಳಲ್ಲಿ ಏರಿಕೆ ಇದ್ದರೂ ಬಸ್ ಸಂಚಾರ ಆರಂಭವಾದ ಹಿನ್ನಲೆ ಬಸ್ ನಿರ್ವಾಹಕರು ಕೊರೊನಾ ದಿಂದ ಮುಂಜಾಗೃತೆಗಾಗಿ ಈಗ ಕೋವಿಡ್ ರಕ್ಷಾ ಕವಚದ ಮೊರೆ ಹೋಗಿದ್ದಾರೆ.

ಸ್ಟೇಟ್ ಬ್ಯಾಂಕ್ ನಿಂದ ಶಕ್ತಿನಗರಕ್ಕೆ ತೆರಳುವ ಬಸ್ ನಂಬರ್ 6ಎ ನಿರ್ವಾಹಕ ಈ ರಕ್ಷಾ ಕವಚ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಈಗಾಗಲೇ ನಗರದ ಖಾಸಗಿ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಸಾಮಾಜಿಕ ಅಂತರ ಹಾಗೂ ಕೊರೊನಾ ಮುಂಜಾಗೃತೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಆದರೂ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿರುವ ಬಸ್ ನಿರ್ವಾಹಕರು ಮುನ್ನೆಚ್ಚರಿಕೆಯಾಗಿ ಕೋವಿಡ್ ರಕ್ಷಣಾ ಕವಚ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.