DAKSHINA KANNADA
ಪುತ್ತೂರು ಕಾಂಗ್ರೆಸ್ ಕಾರ್ಯಕರ್ತನಿಗೆ ಕೊಲೆ ಬೆದರಿಕೆ ಆರೋಪ – ಎಫ್ಐಆರ್ ದಾಖಲಿಸಲು ಪೊಲೀಸರಿಗೆ ಕೋರ್ಟ್ ಸೂಚನೆ
ಪುತ್ತೂರು ಡಿಸೆಂಬರ್ 31:ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದ ಪಕ್ಷದ ಕಾರ್ಯಕರ್ತ ಹಕೀಂ ಕೂರ್ನಡ್ಕ ಎಂಬುವವರಿಗೆ ಜೀವ ಬೆದರಿಕೆ ಹಾಕಿದ್ದವರ ವಿರುದ್ದ ಪ್ರಕರಣ ದಾಖಲಿಸಲು ಪುತ್ತೂರು ನಗರ ಪೋಲೀಸರಿಗೆ ಪುತ್ತೂರು ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ನ್ಯಾಯಾಲಯ ನಿರ್ದೇಶನ ನೀಡಿದೆ.
ಶಾಸಕ ಅಶೋಕ್ ರೈ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಕಾಂಗ್ರೇಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಶಾಸಕರ ಆಪ್ತರು ಎನ್ನಲಾದವರು ವಾಯ್ಸ್ ಮೆಸೆಜ್ ಮೂಲಕ ಹಕೀಂ ಅವರಿಗೆ ಜೀವ ಬೇದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಕೀಂ ಅವರು ವಾಯ್ಸ್ ಮೆಸೇಜ್ ಆಧರಿಸಿ ತಮಗೆ ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡು ಪುತ್ತೂರು ನಗರ ಪೋಲೀಸ್ ಠಾಣೆಗೆ ಡಿಸೆಂಬರ್ 25 ರಂದು ದೂರು ನೀಡಿದ್ದರು. ಆದರೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನ್ಯಾಯಾಲಯದ ಅನುಮತಿ ಕೇಳಿದ್ದರು. ಈ ಹಿನ್ನಲೆ ನ್ಯಾಯಾಲಯ ಇದೀಗ ಎಫ್ಐಆರ್ ದಾಖಲಿಸಲು ಅನುಮತಿ ನೀಡಿದೆ. ಈ ಹಿನ್ನಲೆ ಪೊಲೀಸರು ದೀಚು ರೈ ಈಶ್ವರಮಂಗಲ ಮತ್ತು ಅದ್ದು ಪಡೀಲ್ ಎಂಬವರ ಮೇಲೆ ಎಫ್ .ಐ.ಆರ್ ದಾಖಲಿಸಿದ್ದಾರೆ.