KARNATAKA
ಬೆಂಗಳೂರು ವಿಧಾನಸೌಧದ ಸಮ್ಮುಖ ಸೀಮೆಎಣ್ಣೆ ಸುರಿದುಕೊಂಡು ದಂಪತಿಯಿಂದ ಆತ್ಮಹತ್ಯೆಗೆ ಯತ್ನ..!
ಬೆಂಗಳೂರು: ಬೆಂಗಳೂರು ವಿಧಾನಸೌಧದ ಮುಂಭಾಗದಲ್ಲೇ ಬ್ಯಾಂಕ್ ನಿಂದ ಪಡೆದ ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲದ ಕಾರಣ ದಂಪತಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಜೆಜೆ ನಗರದ ಶಾಯಿಸ್ತಾ ದಂಪತಿ ಬ್ಯಾಂಕ್ ನಿಂದ ಸಾಲ ಪಡೆದಿದ್ದರು ಆದ್ರೆ ಅದನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಬ್ಯಾಂಕ್ ದಂಪತಿಗಳ ಜಮೀನನ್ನು ಹರಾಜು ಹಾಕಿದೆ ಎನ್ನಲಾಗಿದೆ. ಈ ಹಿನ್ನೆಲೆ ಮನನೊಂದ ಶಾಯಿಸ್ತಾ ದಂಪತಿ ವಿಧಾನ ಸೌಧದ ಮುಂಭಾಗ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ದಂಪತಿಯನ್ನು ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಈ ಬಗ್ಗೆ ಮಾಹಿತಿ ನೀಡಿದ ಶಾಯಿಸ್ತಾ ಸಂಬಂಧಿಕರಾದ ಜಾಕೀರ್, ”ಶಾಯಿಸ್ತಾ ಮನೆಯಲ್ಲಿ ಅವರ ಗಂಡ ಹಾಗೂ ಎಂಟು ಜನ ಮಕ್ಕಳು ಇದ್ದಾರೆ. ಅವರಿಗೆ ಮೂರು ಕೋಟಿ ಹಾಗೂ ಒಂದು ಕೋಟಿ ಎಪ್ಪತ್ತು ಲಕ್ಷದ ಆಸ್ತಿ ಇದೆ. ಎಪ್ಪತ್ತು ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅವರು ಅಗರಬತ್ತಿ ಬಿಸಿನೆಸ್ ಮಾಡುವರು. ಶುಂಠಿ ಹಾಕಬೇಕು ಎಂದು ಬೇರೆಯವರ ಜಮೀನು ಅನ್ನು ಲೀಸ್‌ಗೆ ತೆಗೆದುಕೊಂಡಿದ್ದರು. ಚನ್ನಪಟ್ಟಣದಲ್ಲಿ ಶುಂಠಿ ಹಾಕಿದ್ದಾರೆ. ಇದಕ್ಕಾಗಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು””ಬೆಂಗಳೂರು ಕೋಆಪರೇಟಿವ್ ಬ್ಯಾಂಕ್‌ನಲ್ಲಿ ಶುಂಠಿ ಬೆಳೆ ಬೆಳೆಯಲು 50 ಲಕ್ಷ ಸಾಲವನ್ನು ಪಡೆದುಕೊಳ್ಳಲಾಗಿತ್ತು. ಅದರಲ್ಲಿ ಬಡ್ಡಿ, ವಕ್ರಬಡ್ಡಿ ಅಂತೆಲ್ಲಾ 97 ಲಕ್ಷ ಕಟ್ಟಿಸಿಕೊಂಡು ಬಂದಿದ್ದಾರೆ. ಆದರೆ ಬ್ಯಾಂಕ್‌ನವರು ಒಂದುವರೆ ಕೋಟಿ ಕೊಡಬೇಕು ಎಂದು ಕಿರುಕುಳ ನೀಡಿದ್ದಾರೆ. ಹಣ ಕೊಡಲು ಆಗದೇ ಇದ್ದಾಗ, ಒಂದುವರೆ ಕೋಟಿಗೆ ಮನೆಯನ್ನು ಹರಾಜು ಹಾಕಿದ್ದಾರೆ. ಸಾಕಷ್ಟು ಕಿರುಕುಳ ನೀಡಿದ್ದಾರೆ. ಅವರಿಗೆ ಈಗ ಊಟಕ್ಕೂ ದುಡ್ಡು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಶಾಯಿಸ್ತಾ ತಮಗೆ ನ್ಯಾಯ ಕೇಳಲು ಸಚಿವ ಜಮೀರ್ ಅಹ್ಮದ್ ಅವರನ್ನು ಭೇಟಿ ಮಾಡಿದ್ದರಂತೆ. ಆಗ ಅವರು ನ್ಯಾಯ ನೀಡುವ ಭರವಸೆ ಕೊಟ್ಟಿದ್ದರು ,ಆದರೂ ಮನೆಯನ್ನು ಹರಾಜಿಗೆ ಹಾಕಿ ತಮ್ಮನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ಅವರು ದೂರಿದ್ದಾರೆ.