LATEST NEWS
ಗ್ರಾಮಪಂಚಾಯತ್ ಚುನಾವಣೆಯ ಮತ ಎಣಿಕೆ ಆರಂಭ

ಮಂಗಳೂರು ಡಿಸೆಂಬರ್ 30: ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಇಂದು ಆರಂಭವಾಗಿದ್ದು, 2.22 ಲಕ್ಷ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಮತ ಏಣಿಕೆ ಆರಂಭವಾಗಿದೆ.
ಎರಡು ಹಂತಗಳಲ್ಲಿ 226 ತಾಲೂಕುಗಳ 5,728 ಗ್ರಾಮ ಪಂಚಾಯಿತಿಗಳ 72,000 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಶೇ.80ಕ್ಕೂ ಹೆಚ್ಚು ಮತದಾನವಾಗಿತ್ತು. 2,22,814 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈಗಾಗಲೇ 8074 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಂಗಳೂರಿನಲ್ಲಿ ಬೊಂದೆಲ್‌ನ ಪ್ರೌಢ ಶಾಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆಯು ಪ್ರಾರಂಭವಾದರೆ, ಉಡುಪಿಯಲ್ಲಿ ಸೇಂಟ್ ಸೆಸಿಲಿಯ ಸಂಸ್ಥೆ ಬ್ರಹ್ಮಗಿರಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಉಡುಪಿಯ ಏಳು ತಾಲೂಕುಗಳ ಒಟ್ಟು 152 ಪಂಚಾಯತ್ ಗಳ ಒಟ್ಟು 863 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 1136 ಮತಗಟ್ಟೆಗಳಲ್ಲಿ 5,83,342 ಮಂದಿ ಮತಚಲಾಯಿಸಿದ್ದರು.
ಜಿಲ್ಲೆಯ ಏಳು ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಈ ಮತಗಳ ಎಣಿಕೆಗೆ ಒಟ್ಟು 284 ಟೇಬಲ್ ವ್ಯವಸ್ಥೆ ಮಾಡಲಾಗಿದೆ. 948 ಅಧಿಕಾರಿ- ಸಿಬ್ಬಂದಿ ಮತ ಎಣಿಕೆ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಉಡುಪಿ ಜಿಲ್ಲೆಯಲ್ಲಿ 5057 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಜಿಲ್ಲೆಯಲ್ಲಿ 152 ಗ್ರಾ.ಪಂ.ಗಳ ಒಟ್ಟು 2225 ಸದಸ್ಯ ಸ್ಥಾನಗಳಿಗೆ 5057 ಮಂದಿ ಅಭ್ಯರ್ಥಿಗಳು ಅದರಲ್ಲಿ 128 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ 7 ತಾಲ್ಲೂಕುಗಳ 220 ಗ್ರಾಮ ಪಂಚಾಯಿತಿಗಳ 3181 ಸ್ಥಾನಗಳಿಗೆ ಮತ ಎಣಿಕೆ ಆರಂಭವಾಗಿದೆ. ಆಯಾ ತಾಲ್ಲೂಕುಗಳಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದ್ದು, 7,275 ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ. 91 ಮಂದಿ ಈಗಾಗಲೇ ಅವಿರೋಧ ಆಯ್ಕೆ ಆಗಿದ್ದಾರೆ.