LATEST NEWS
ಕರೋನಾ ವೈರಸ್ ಭೀತಿ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ
ಕರೋನಾ ವೈರಸ್ ಭೀತಿ ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ
ಮಂಗಳೂರು ಮಾರ್ಚ್ 3: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಈಗಾಗಲೇ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು .ಬಿ. ರೂಪೇಶ್ ಹೇಳಿದ್ದಾರೆ.
ಈ ಕುರಿತು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಂಗಳೂರು ವಿಮಾನ ನಿಲ್ದಾಣ ಮತ್ತು ಬಂದರಿನಲ್ಲಿ ಆಗಮಿಸುವ ವಿದೇಶಿ ಪ್ರಯಾಣಿಕರ ತಪಾಸಣೆ ಮಾಡಲಾಗುತ್ತಿದೆ.
ಪ್ರತಿದಿನ ಸರಾಸರಿ 500 ರಿಂದ 600 ಕ್ಕೂ ಅಧಿಕ ಮಂದಿಗಳ ತಪಾಸಣೆ ಮಾಡಲಾಗುತ್ತಿದೆ. ಈಗಾಗಲೇ ಮಂಗಳೂರು ವಿಮಾನ ನಿಲ್ದಾಣದಲ್ಲಿ 20 ಸಾವಿರ ಮಂದಿ ತಪಾಸಣೆ ನಡೆಸಲಾಗಿದೆ. ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಗಳನ್ನ ತೆರೆಯಲಾಗಿದೆ. ಯಾವುದೇ ಸೋಂಕಿತರ ಚಿಕಿತ್ಸೆಗೆ ಸಜ್ಜಾಗಿದೆ ಎಂದರು
ಈಗಾಗಲೇ ಮಂಗಳೂರು ನಗರದಲ್ಲಿರುವ ವೆನ್ಲಾಕ್ ಆಸ್ಪತ್ರೆಯಲ್ಲಿ ಶಂಕಿತ ಕೊರೊನಾ ರೋಗಿಗಳಿಗಾಗಿ ಪ್ರತ್ಯೇಕ ಐಸೋಲೇಶನ್ ವಾರ್ಡ್ ನ್ನು ಸಿದ್ದಪಡಿಸಲಾಗಿದೆ. 20 ಹಾಸಿಗೆಗಳುಳ್ಳ ಐಸೋಲೇಶನ್ ವಾರ್ಡ್ ಹಾಗೂ ಹೆಚ್ಚುವರಿ 10 ಬೆಡ್ ಗಳನ್ನು ಇದಕ್ಕಾಗಿಯೇ ಕಾಯ್ದಿರಿಸಲಾಗಿದೆ. ಅಲ್ಲದೇ ಮಾಸ್ಕ್ ಹಾಗೂ ಇನ್ನಿತರ ಸುರಕ್ಷತಾ ಕಿಟ್ ಗಳನ್ನು ಆಸ್ಪತ್ರೆಯಲ್ಲಿ ಸಿದ್ದವಾಗಿರಿಸಿದ್ದು. ಆಸ್ಪತ್ರೆಗೆ ಬರುವಂತಹ ರೋಗಿಗಳಿಗೂ ಕೊರೊನಾ ರೋಗದ ಬಗ್ಗೆ ಸೂಕ್ತ ಮಾಹಿತಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.