LATEST NEWS
ಕರೋನಾ ಮಾರಿ ಹಿನ್ನಲೆ 7,8 ಮತ್ತು 9 ನೇ ತರಗತಿಗಳ ಪರೀಕ್ಷೆಗಳನ್ನು ಮುಂದೂಡಿ ಸರ್ಕಾರ ಆದೇಶ

ಕರೋನಾ ಮಾರಿ ಹಿನ್ನಲೆ 7,8 ಮತ್ತು 9 ನೇ ತರಗರಿಗಳ ಪರೀಕ್ಷೆಗಳನ್ನು ಮುಂದೂಡಿ ಸರ್ಕಾರ ಆದೇಶ
ಬೆಂಗಳೂರು: ಮಾರಣ ಹೋಮ ನಡೆಸುತ್ತಿರುವ ಕೊರೋನಾ ವೈರಸ್ ದಾಳಿಯಿಂದ ಕರ್ನಾಟಕ ರಾಜ್ಯ ಕೂಡ ತತ್ತರಿಸಿ ಹೋಗಿದೆ. ಅಕಾಲಿಕವಾಗಿ ಬದೆರಗಿದ ಮಹಾಮಾರಿ ರಾಜ್ಯದಲ್ಲಿ ನಡೆಯ ಬೇಕಾಗಿದ್ದ ವಾರ್ಷಿಕ ಪರೀಕ್ಷೆಗಳ ಮೇಲೂ ಪರಿಣಾಮ ಬೀರಿದೆ.
ಈ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆಗಳನ್ನ ಮುಂದೂಡಿಕೆ ಮಾಡಿ ಸಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಮಾರ್ಚ್ 31 ವರೆಗೂ 7,8 ಮತ್ತು 9ನೇ ತರಗತಿಗಳನ್ನು ಮತ್ತು ಪರೀಕ್ಷೆಗಳನ್ನು ನಡೆಸದಂತೆ ರಾಜ್ಯದ ಎಲ್ಲಾ ಶಾಲೆಗಳಿಗೂ ಆದೇಶ ಹೊರಡಿಸಿದೆ.

ಈ ಮೊದಲು ಮಾರ್ಚ್ 23ರ ಒಳಗೆ 7-9 ನೇ ತರಗತಿವರೆಗೆ ಪರೀಕ್ಷೆಗಳು ಮುಗಿಸಿ ಬೇಸಿಗೆ ರಜೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ ಹಳೇಯ ಆದೇಶವನ್ನು ರದ್ದು ಮಾಡಿ ಮಾರ್ಚ್ 31 ವರೆಗೆ 7-9 ನೇ ತರಗತಿವರೆಗೆ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳಿಗೆ ರಜೆ ನೀಡಬೇಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮಾರ್ಚ್ 31 ರ ನಂತರ ಹೊಸ ವೇಳಾಪಟ್ಟಿ ಹೊರಡಿಸೋದಾಗಿಯೂ ಶಿಕ್ಷಣ ಇಲಾಖೆ ತಿಳಿಸಿದೆ.ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೆ ಯಾವುದೇ ತೊಂದರೆ ಇಲ್ಲ. ಮೊದಲೇ ನಿಗದಿಯಾಗಿರುವಂತೆ ಮಾರ್ಚ್ 27 ರಿಂದ ಪರೀಕ್ಷೆಗಳು ನಡೆಯಲಿದೆ. ಯಾವುದೇ ಬದಲಾವಣೆ ವೇಳಾಪಟ್ಟಿಯಲ್ಲಿ ಇಲ್ಲ ಅಂತ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಇದಲ್ಲದೆ ಈಗಾಗಲೇ ನಡೆಯುತ್ತಿರೋ ದ್ವಿತೀಯ ಪಿಯುಸಿ ಪರೀಕ್ಷೆಗಳು ಮೊದಲ ವೇಳಾಪಟ್ಟಿಯಂತೆ ಮುಂದುವರಿಯಲಿವೆ ಅಂತ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಅತ್ತ 1 ರಿಂದ 6 ನೇ ತರಗತಿವರೆಗೆ ಪರೀಕ್ಷೆಗಳನ್ನ ಶಿಕ್ಷಣ ಇಲಾಖೆ ರದ್ದು ಮಾಡಿ ಮಕ್ಕಳಿಗೆ ಬೇಸಿಗೆ ರಜೆ ಘೋಷಿಸಿದೆ. ಈಗ 7-9 ನೇ ತರಗತಿವರೆಗೆ ಪರೀಕ್ಷೆ ಮುಂದೂಡಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಮುಂದೆ ವೇಳಾಪಟ್ಟಿ ಪ್ರಕರಣ ಮಾಡೋದಾಗಿ ಶಿಕ್ಷಣ ಇಲಾಖೆ ಹೇಳಿದೆ.