LATEST NEWS
ಕೇರಳದಲ್ಲಿ ಹಠಾತ್ ಏರಿಕೆಯಾದ ಕೊರೊನಾ ಪ್ರಕರಣಗಳು…!!
ಕೊಚ್ಚಿ ಡಿಸೆಂಬರ್ 14: ಕೇರಳದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಹಠಾತ್ ಏರಿಕೆಯಾಗಿದೆ . ರಾಜ್ಯದಲ್ಲಿ ನವೆಂಬರ್‌ನಲ್ಲಿ 479 ಪ್ರಕರಣಗಳಿದ್ದರೆ, ಈ ತಿಂಗಳ ಮೊದಲ ಎಂಟು ದಿನಗಳಲ್ಲಿ 825 ಹೊಸ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ 90% ಕ್ಕಿಂತ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ಕೇರಳದಲ್ಲಿ ದಾಖಲಾಗಿದೆ.
ಕೊರೊನಾ ಪ್ರಕರಣಗಳು ದೇಶದಲ್ಲಿ ಬಹುತೇಕ ಕಡಿಮೆಯಾದರೂ ಕೇರಳದಲ್ಲಿ ಇದೀಗ ಕೊರೊನಾ ಸಂಖ್ಯೆ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕೇರಳದಲ್ಲಿ ನವೆಂಬರ್‌ನಲ್ಲಿ ಒಬ್ಬ ರೋಗಿಯು ಸಾವನ್ನಪ್ಪಿದ್ದರೆ, ಈ ತಿಂಗಳು ಇಬ್ಬರು ವೈರಸ್‌ಗೆ ಬಲಿಯಾಗಿದ್ದಾರೆ.
ಉಸಿರಾಟದ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಪ್ರಸ್ತುತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಹೆಚ್ಚಿನ ರೋಗಿಗಳಲ್ಲಿ ಸೋಂಕು ತುಂಬಾ ತೀವ್ರವಾಗಿಲ್ಲ ಮತ್ತು ಕೋವಿಡ್‌ನಿಂದ ಸಾವುಗಳು ಬಹಳ ಕಡಿಮೆ ಇರುವುದರಿಂದ ಇದನ್ನು ನಿರ್ವಹಿಸಬಹುದಾಗಿದೆ. ಇನ್ನು ಕೇರಳದಲ್ಲಿ ಪತ್ತೆಯಾದ ಕೊರೊನಾ ವೈರಲ್ ಕೋವಿಡ್ ಸಬ್‌ವೇರಿಯಂಟ್ JN.1 ಎಂದು ತಿಳಿದು ಬಂದಿದೆ.