LATEST NEWS
ನಿಮ್ಮ ನಿಮ್ಮ ತಂದೆ ತಾಯಿಗೆ ಕೊರೊನಾ ಲಸಿಕೆ ಕೊಡಿಸಿ – ಉಡುಪಿ ಜಿಲ್ಲಾಧಿಕಾರಿ ಮನವಿ

ಉಡುಪಿ ಎಪ್ರಿಲ್ 1: ಇಂದಿನಿಂದ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಕಾರ್ಯಕ್ರಮ ಆರಂಭವಾಗಿದೆ. ಈ ಹಿನ್ನಲೆ ಉಡುಪಿ ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ವಿಶೇಷವಾದ ಮನವಿಯೊಂದನ್ನು ಮಾಡಿಕೊಂಡಿದ್ದು, ಸಾರ್ವಜನಿಕರು ತಮ್ಮ ತಂದೆ ತಾಯಿಗೆ ಕೊರೊನಾ ಲಸಿಕೆಯನ್ನು ಕೊಡಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್. ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ವಿಡಿಯೋ ಮೂಲಕ ಮನವಿ ಮಾಡಿಕೊಂಡಿರುವ ಅವರು ನಾವೆಲ್ಲರೂ ಚಿಕ್ಕವರಿರುವಾಗ ತಂದೆ ತಾಯಿ ಮಕ್ಕಳಿಗೆ ಲಸಿಕಾ ಹಾಕಿಸುತ್ತಾ ಇದ್ದರು. ಈಗ ತಮ್ಮ ತಂದೆ ತಾಯಿಗೆ ಲಸಿಕೆಯನ್ನು ಕೊಡಿಸಿ. ಯಾಕೆಂದರೆ ತಂದೆ-ತಾಯಿಯಂದಿರುವ ಲಸಿಕೆ ನೀಡಿ ರೋಗದಿಂದ ಮಕ್ಕಳ ರಕ್ಷಣೆಯನ್ನು ಮಾಡಿದ್ದಾರೆ ಎಂದರು.

ಇನ್ನು ಕೊರೊನಾ ಬಾಧಿತರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರಾಗಿದ್ದು, ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಉಡುಪಿಯ ಜನತೆಯೂ ತಮ್ಮ ಜವಾಬ್ದಾರಿ ನಿರ್ವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.