LATEST NEWS
ಜೂನ್ 21 ರಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೊನಾ ಲಸಿಕೆ – ಪ್ರಧಾನಿ ನರೇಂದ್ರ ಮೋದಿ ಘೋಷಣೆ
ನವದೆಹಲಿ ಜೂನ್ 07: ಜೂನ್ 21 ರಿಂದ ದೇಶದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದೆಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಜೂ.21ರಂದು ಅಂತರರಾಷ್ಟ್ರೀಯ ಯೋಗದಿವಸ. ಆ ದಿನದಿಂದ 18 ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ.ಯಾವುದೇ ರಾಜ್ಯಸರ್ಕಾರಗಳಿಗೆ ಲಸಿಕಾಕರಣಕ್ಕಾಗಿ ಯಾವುದೇ ಹಣವನ್ನು ಪಾವತಿಸಬೇಕಿಲ್ಲ ಎಂದರು.
ಎಲ್ಲ ದೇಶವಾಸಿಗಳಿಗೆ ಭಾರತ ಸರ್ಕಾರವೇ ಉಚಿತ ಲಸಿಕೆಯನ್ನು ನೀಡುತ್ತದೆ. ಉಚಿತ ಲಸಿಕೆ ಬೇಡ ಎಂದುಕೊಂಡವರಿಗೆ, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವ ಸಾಮರ್ಥ್ಯ ಇರುವವರಿಗಾಗಿ ಅಂಥವರಿಗಾಗಿಯೇ ಖಾಸಗಿ ಆಸ್ಪತ್ರೆಗಳಿಗೂ ಶೇ.25 ಲಸಿಕೆಗಳನ್ನು ಒದಗಿಸಲಾಗುತ್ತದೆ. ಅವರು ಗರಿಷ್ಠ 150 ರೂ. ಸೇವಾ ಶುಲ್ಕ ತೆಗೆದುಕೊಂಡು, ಲಸಿಕೆಯನ್ನು ನೀಡಬಹುದು ಎಂದು ತಿಳಿಸಿದರು.
ಲಸಿಕೆಯ ಪ್ರತಿಯೊಂದು ಡೋಸ್ ಕೂಡ ಅತ್ಯಂತ ಮಹತ್ವಪೂರ್ಣವಾದುದು. ಒಂದು ಡೋಸ್ ಜೊತೆಗೂ ಒಂದು ಜೀವವೇ ಸೇರಿಕೊಂಡಿದೆ. ಕೇಂದ್ರವು, ಯಾರಿಗೆ ಎಷ್ಟು ಲಸಿಕೆ ದೊರೆಯುತ್ತದೆ ಎಂಬುದನ್ನು ವಾರಗಳ ಮುಂಚೆಯೇ ತಿಳಿಸಲಿದ್ದು. ಲಸಿಕೆಯ ಉಪಲಬ್ಧತೆಯ ಅನುಸಾರ, ಎಲ್ಲ ಕಡೆ ಲಸಿಕೆ ವಿತರಣೆಯಾಗಲಿ ಎಂದರು.