LATEST NEWS
ರಾಜ್ಯದಲ್ಲಿ ಕೊರೊನಾ ಸಮುದಾಯ ಹಂತಕ್ಕೆ ತಲುಪಿದೆ – ಖಾದರ್
ಮಂಗಳೂರು ಜುಲೈ 10: ಕೊರೊನಾ ಇಡೀ ರಾಜ್ಯದಲ್ಲಿ ಕಮ್ಯುನಿಟಿ ಸ್ಪ್ರೆಡ್ ಆಗಿದ್ದು, ರಾಂಡಮ್ ಟೆಸ್ಟ್ ಆಗದಿದ್ದರೆ ಆರು ತಿಂಗಳಲ್ಲಿ ಅತಿರೇಕಕ್ಕೆ ಹೋಗಲಿದೆ ಎಂದು ಮಾಜಿ ಆರೋಗ್ಯ ಸಚಿವ ಯು.ಟಿ ಖಾದರ್ ಎಚ್ಚರಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕೊರೊನಾ ಕಮ್ಯುನಿಟಿ ಸ್ಪ್ರೆಡ್ ಆಗಿರುವುದನ್ನು ಸಚಿವ ಮಾಧುಸ್ವಾಮಿ ಒಪ್ಪಿದ್ದಾರೆ. ಆದರೆ ಈ ಬಗ್ಗೆ ಅಧಿಕೃತವಾಗಿ ಹೇಳಲು ಸರಕಾರದ ಮಟ್ಟದಲ್ಲಿ ಗೊಂದಲ ಇದೆ. ಬೆಂಗಳೂರಿನಲ್ಲಿ ಬಿಬಿಎಂಪಿ ರ್ಯಾಂಡಮ್ ಟೆಸ್ಟ್ ಅರ್ಧಕ್ಕೆ ನಿಲ್ಲಿಸಿದ್ದು ಕೊರೊನಾ ವಿಪರೀತಕ್ಕೆ ಕಾರಣವಾಗಿದ್ದು, ಪಾಸಿಟಿವ್ ಆಗುವುದು ಹೆಚ್ಚುತ್ತಿದ್ದಾರೆಂದು ಟೆಸ್ಟಿಂಗ್ ನಿಲ್ಲಿಸಿದ್ರು, ಪಾಸಿಟಿವ್ ಹೆಚ್ಚುವುದೆಂದು ಸರಕಾರ ಯಾಕೆ ಭಯ ಪಡುತ್ತಿದೆ ಎಂದು ಪ್ರಶ್ನಿಸಿದರು.
ಕೊರೊನಾ ಟೆಸ್ಟ್ ಮಾಡಿಲ್ಲ ಅಂತ ವೈರಸ್ ಹರಡುವುದು ನಿಲ್ಲುವುದಿಲ್ಲ, ರಾಜ್ಯದಲ್ಲಿ ಎರಡು ಲಕ್ಷದಷ್ಟು ಸರಕಾರಿ ಬೆಡ್ ಗಳಿದ್ದು ಭಯ ಪಡಬೇಕಿಲ್ಲ , ಆದರೆ ರಾಜ್ಯ ಸರಕಾರ ಅವೈಜ್ಞಾನಿಕ ಕೆಲಸ ಮಾಡಿದರೆ ಮೂರು ತಿಂಗಳಲ್ಲೇ ಅವಾಂತರ ಆಗಲಿದೆ. ಮಂಗಳೂರು ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಟೆಸ್ಟ್ ಮಾಡಿಸುತ್ತೇನೆ, ದಾನಿಗಳಿಂದ ಆಂಬುಲೆನ್ಸ್ ಪಡೆದು ಕಾರ್ಯಪಡೆ ರಚಿಸುತ್ತೇನೆ. ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ಮೂಲಕ ರ್ಯಾಪಿಡ್ ಟೆಸ್ಟ್ ಆಗಬೇಕು ಮಾಜಿ ಸಚಿವ ಯು.ಟಿ ಖಾದರ್ ಆಗ್ರಹಿಸಿದ್ದಾರೆ.