LATEST NEWS
ಮಂಗಳೂರಿನಲ್ಲಿ ಶಂಕಿತ ಕೊರೊನಾ ಪ್ರಕರಣ ಪತ್ತೆ ಆಸ್ಪತ್ರೆಗೆ ದಾಖಲು

ಮಂಗಳೂರಿನಲ್ಲಿ ಶಂಕಿತ ಕೊರೊನಾ ಪ್ರಕರಣ ಪತ್ತೆ ಆಸ್ಪತ್ರೆಗೆ ದಾಖಲು
ಮಂಗಳೂರು ಎಪ್ರಿಲ್ 6: ಮಂಗಳೂರು ನಗರದಲ್ಲಿ ಮತ್ತೊಂದು ಕೊರೋನಾ ಶಂಕಿತ ಪ್ರಕರಣ ಬೆಳಕಿಗೆ ಬಂದಿದೆ. ಬಿಕರ್ನಕಟ್ಟೆ -ಶಕ್ತಿನಗರ ರಸ್ತೆಯಲ್ಲಿರುವ ಸೌಜನ್ಯ ಲೇನ್ ನಿವಾಸಿಯು ಕಳೆದ ಕೆಲ ದಿನಗಳಿಂದ ಜ್ವರ ಪೀಡಿತನಾಗಿದ್ದು, ಮಾಹಿತಿ ತಿಳಿದ ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದಾರೆ.
ಕೂಡಲೇ ಆರೋಗ್ಯಾಧಿಕಾರಿಳಿಗ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಕಂಕನಾಡಿ ನಗರ ಪೊಲೀಸ್ ಠಾಣಾ ಸಿಬಂದಿಗಳು ಆತನ ಮನವೊಲಿಸಿ ಆಸಪತ್ರೆಗೆ ದಾಖಲು ಮಾಡಿದ್ದಾರೆ. ಮಾಹಿತಿ ಗಳ ಪ್ರಕಾರ ಈತ ಕೊರೊನಾ ಸೋಂಕು ಧೃಡವಾದ ತೊಕ್ಕೊಟ್ಟಿನ ವ್ಯಕ್ತಿಯ ಸಂಪರ್ಕವನ್ನು ಹೊಂದಿದ್ದ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ನೆರೆಹೊರೆಯ ವ್ಯಕ್ತಿಗಳಲ್ಲೂ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ದೂರು ಪಡೆದ ಕೂಡಲೇ ಮಂಗಳೂರು ಪೊಲೀಸ್ ಕಮಿಶನರೇಟ್ ವ್ಯಾಪ್ತಿಯ ಮಂಗಳೂರು ಕಂಕನಾಡಿ ಟೌನ್ ಪೊಲೀಸರ ಸ್ಪಂದನೆಯು ಪದವು ಗ್ರಾಮದ ಬಿಕರ್ನಕಟ್ಟೆ ಪರಿಸರದ ನಿವಾಸಿಗಳಿಂದ ತುಂಬಾ ಮೆಚ್ಚುಗೆಗೆ ಅರ್ಹವಾಗಿದೆ. .