LATEST NEWS
ದೇಶದಲ್ಲಿ ಒಂದೇ ದಿನ 90,928 ಕೊರೊನಾ ಪ್ರಕರಣ ದಾಖಲು
ನವದೆಹಲಿ ಜನವರಿ 06: ದೇಶದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಗುರುವಾರ ಪ್ರಕರಣ ಸಂಖ್ಯೆ ಮತ್ತೆ ಡಬಲ್ ಆಗಿದ್ದು ಕಳೆದ 24 ಗಂಟೆಗಳಲ್ಲಿ 90,928 ಹೊಸ ಪ್ರಕರಣಗಳು ಪತ್ತೆಯಾಗಿದ್ದು 325 ಮಂದಿ ಮೃತಪಟ್ಟಿದ್ದಾರೆ. ಕೊವೀಡ್ ಪಾಸಿಟಿವ್ ದರ 6.43% ಏರಿಕೆ ಕಂಡಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣಗಳು ತೀವ್ರ ಏರಿಕೆ ಕಂಡಿವೆ. ಬುಧವಾರ 58 ಸಾವಿರದಷ್ಟು ಪ್ರಕರಣಗಳು ವರದಿಯಾಗಿದ್ದರೆ, ಇಂದು 90,928 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಇದರೊಂದಿಗೆ ಭಾರತದ ಪಾಸಿಟಿವಿಟಿ ದರ ಶೇ 6.43ಕ್ಕೆ ತಲುಪಿದ್ದು, ಆತಂಕ ಉಂಟುಮಾಡಿದೆ. ಇನ್ನು ಈ 24 ಗಂಟೆಗಳಲ್ಲಿ 325 ಮಂದಿ ಮೃತಪಟ್ಟಿರುವುದು ಸರ್ಕಾರದ ಅಂಕಿ ಅಂಶಗಳಿಂದ ಗೊತ್ತಾಗಿದೆ. ಸಾವಿನ ಒಟ್ಟು ಸಂಖ್ಯೆ 4,82,876ಕ್ಕೆ ತಲುಪಿದೆ. ಸದ್ಯ ದೇಶದಲ್ಲಿ 2,85,401 ಸಕ್ರಿಯ ಪ್ರಕರಣಗಳಿದ್ದು, ಈ ವರೆಗೆ 3,43,41,009 ಮಂದಿ ಗುಣಮುಖರಾಗಿದ್ದಾರೆ. ಇನ್ನೊಂದೆಡೆ ದೇಶದಲ್ಲಿ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 2630ಕ್ಕೆ ಏರಿಕೆಯಾಗಿದೆ.