DAKSHINA KANNADA
ಮತ್ತೆ ಶುರುವಾದ ಕುಕ್ಕೆ ಪೂಜಾ ವಿವಾದ, ಸ್ವಾಮೀಜಿ ಪರ ಬ್ಯಾಟಿಂಗ್ ಆರಂಭ
ಮತ್ತೆ ಶುರುವಾದ ಕುಕ್ಕೆ ಪೂಜಾ ವಿವಾದ, ಸ್ವಾಮೀಜಿ ಪರ ಬ್ಯಾಟಿಂಗ್ ಆರಂಭ
ಪುತ್ತೂರು ಸೆಪ್ಟೆಂಬರ್ 24: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆಯನ್ನು ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ನಡೆಸುತ್ತಿರುವ ಬಗ್ಗೆ ಇದೀಗ ಮತ್ತೆ ವಿವಾದ ಭುಗಿಲೆದ್ದಿದೆ.
ನರಸಿಂಹ ಮಠದ ಸ್ವಾಮೀಜಿ ಇದೀಗ ತನ್ನ ಹಿಂಬಾಲಕರನ್ನು ಸೇರಿಸಿಕೊಂಡು ತನ್ನ ಪರವಾಗಿ ಬ್ಯಾಟಿಂಗ್ ನಡೆಸಲು ಆರಂಭಿಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಸುಬ್ರಹ್ಮಣ್ಯ ಕ್ಷೇತ್ರಕ್ಕಿಂತ ಸಂಪುಟ ನರಸಿಂಹ ಮಠದಲ್ಲೇ ಸರ್ಪ ಸಂಸ್ಕಾರ ಹಾಗೂ ಅಶ್ಲೇಷ ಬಲಿ ಪೂಜೆ ನಡೆಸಿದರೆ ದೇವರಿಗೆ ಸಮರ್ಪಣೆಯಾಗುತ್ತದೆ ಎನ್ನುವ ಹೇಳಿಕೆಗಳನ್ನು ಈ ಹಿಂಬಾಲಕರು ನೀಡಲಾರಂಭಿಸಿದ್ದಾರೆ.
ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೂ ಕಾರಣವಾಗಿದೆ. ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡ ಕೆಲವು ಮುಖಂಡರನ್ನು ಸೇರಿಸಿಕೊಂಡು ಸಂಪುಟ ನರಸಿಂಹ ಸ್ವಾಮೀಜಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವಿರುದ್ಧವಾಗಿಯೇ ಮಾತನಾಡಲು ಆರಂಭಿಸಿದ್ದಾರೆ.
ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆಯನ್ನು ನರಸಿಂಹ ಮಠದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದೆ ಎನ್ನುವ ಆರೋಪದ ನಡುವೆಯೇ ಮಠದ ಸ್ವಾಮೀಜಿಗಳು ತಮ್ಮ ಮಠದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಸಮರ್ಥಿಸುವ ಕಾರ್ಯವನ್ನು ಆರಂಭಿಸಿದ್ದಾರೆ.
ತನ್ನ ಚಾತುರ್ಮಾಸ ದಿನವನ್ನೇ ಇದಕ್ಕಾಗಿ ಬಳಸಿಕೊಂಡಿರುವ ಸ್ವಾಮೀಜಿ ಸುದರ್ಮ ಕಾರ್ಯಕ್ರಮದ ಮೂಲಕ ತನ್ನ ನಿಲುವನ್ನು ಸಮಾಜದ ಮುಂದಿಡಲು ಆರಂಭಿಸಿದ್ದು, ಈ ಬೆಳವಣಿಗೆಗೆ ಇದೀಗ ಭಾರೀ ಚರ್ಚೆಗೂ ಕಾರಣವಾಗಿದೆ.