BELTHANGADI
ಮುಸ್ಲಿಂರ ಸ್ಮಶಾನದಲ್ಲಿರುವ ಕಲ್ಲನ್ನು ಶಿವಲಿಂಗಕ್ಕೆ ಹೋಲಿಸಿದ ಮುಸ್ಲಿಂ ಮುಖಂಡ..ವಿಎಚ್ ಪಿ ಯಿಂದ ದೂರು ದಾಖಲು

ಬೆಳ್ತಂಗಡಿ ಜೂನ್ 29: ಮುಸ್ಲಿಂ ಸಮುದಾಯದ ಮಸೀದಿಯಲ್ಲಿರು ಕಲ್ಲನ್ನು ಶಿವಲಿಂಗಕ್ಕೆ ಹೋಲಿಸಿ ಬೆಳ್ತಂಗಡಿ ಕಾಂಗ್ರೇಸ್ ಮುಖಂಡ ವಿವಾದ ಹುಟ್ಟು ಹಾಕಿದ್ದು, ಇದೀಗ ಕಾಂಗ್ರೇಸ್ ಮುಖಂಡನ ವಿರುದ್ದ ಹಿಂದೂ ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಳ್ತಂಗಡಿಯ ಕಾಜೂರು ಮಸೀದಿಗೆ ಸಂಬಂಧಿಸಿದಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಜೂರು ಮಸೀದಿ ಪಕ್ಕದಲ್ಲಿ ಕಬರ್ ಸ್ತಾನಗಳು ಇದ್ದು, ಅಲ್ಲಿ ಹಾಕಿರುವ ಕಲ್ಲುಗಳನ್ನು ಹಿಂದೂ ಸಂಘಟನೆಗಳು ಶಿವಲಿಂಗ ಎಂದು ಹೇಳಬಹುದು ಆ ಕಾರಣಕ್ಕೆ ಬಿಜೆಪಿ ಸಚಿವರನ್ನು,ಜನಪ್ರತಿನಿಧಿಗಳನ್ನು,ಹಿಂದೂ ಸಂಘಟನೆಯವರನ್ನು ಮಸೀದಿ ಪಕ್ಕ ಬರಲು ಬಿಡಬೇಡಿ, ಅವರು ಬಂದಾಗ ಎಚ್ಚರದಿಂದಿರಿ ಎಂದು ಮುಸ್ಲಿಂ ಸಮುದಾಯಕ್ಕೆ ಎಚ್ಚರಿಸಿದ್ದಾರೆ.
ಇದೀಗ ಬೆಳ್ತಂಗಡಿ ಕಾಂಗ್ರೇಸ್ ಮುಖಂಡ ಸಲೀಂ ಶಿವಲಿಂಗಕ್ಕೆ ಅವಹೇಳನ ಮಾಡಿದ ಹಿನ್ನಲೆ ಸಲೀಂ ವಿರುದ್ಧ ಪೋಲೀಸರಿಗೆ ದೂರು ನೀಡಲಾಗಿದೆ. ಸ್ಥಳೀಯ ವಿಶ್ವಹಿಂದೂ ಪರಿಷತ್ ನಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
