UDUPI
ಒಂದು ಕೋಟಿ ವೆಚ್ಚದಲ್ಲಿ ನೂತನ ಮಾರ್ಕೆಟ್ ನಿರ್ಮಾಣ- ಪ್ರಮೋದ್ ಮಧ್ವರಾಜ್
ಒಂದು ಕೋಟಿ ವೆಚ್ಚದಲ್ಲಿ ನೂತನ ಮಾರ್ಕೆಟ್ ನಿರ್ಮಾಣ- ಪ್ರಮೋದ್ ಮಧ್ವರಾಜ್
ಉಡುಪಿ ಫೆಬ್ರವರಿ 7: ಉಡುಪಿ ನಗರಸಭಾ ವ್ಯಾಪ್ತಿಯ ಗೋಪಾಲಪುರ ವಾರ್ಡ್ ನಲ್ಲಿ 1 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಮಾರ್ಕೆಟ್ ಯಾರ್ಡ್ ನಿರ್ಮಾಣವಾಗಲಿದೆ ಎಂದು ರಾಜ್ಯದ ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಬುಧವಾರ ಗೋಪಾಲಪುರ ವಾರ್ಡ್ ನಲ್ಲಿ ನೂತನ ಮಾರ್ಕೆಟ್ ಯಾರ್ಡ್ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಸಿ ಮಾತನಾಡಿದರು.
ಪ್ರಸ್ತುತ ಸಂತೆಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಪ್ರತಿವಾರ ಸಂತೆ ನಡೆಯುತ್ತಿದ್ದು, ಇದರಿಂದ ರಸ್ತೆ ಸಂಚಾರ ವ್ಯತ್ಯಯಗೊಳ್ಳುತ್ತಿದೆ ಅಲ್ಲದೇ ಸಂತೆ ನಡೆಯುವ ಪ್ರದೇಶ ಕೂಡಾ ತುಂಬಾ ಕಿರಿದಾಗಿದ್ದು, ಇದರಿಂದ ವ್ಯಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದೆರೆಯಾಗುತ್ತಿದ್ದು, ವಾಹನ ಪಾರ್ಕಿಂಗ್ ಸಮಸ್ಯೆ ಸಹ ಇದೆ , ಹೊಸ ಮಾರ್ಕೆಟ್ ಯಾರ್ಡ್ ನಿರ್ಮಾಣದಿಂದ ಈ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ ಎಂದು ಸಚಿವರು ಹೇಳಿದರು.
ಗೋಪಾಲಪುರ ವಾರ್ಡಿನಲ್ಲಿ 151.60 ಲಕ್ಷ ವೆಚ್ಚದಲ್ಲಿ ಐಡಿಎಸ್‍ಎಂಟಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಉದ್ಘಾಟನೆ , 4 ಲಕ್ಷ ವೆಚ್ಚದ ಗೋಪಾಲಪುರ ವಾರ್ಡಿನ 1 ನೇ ಮುಖ್ಯ ರಸ್ತೆಯ 5 ನೇ ಅಡ್ಡರಸ್ತೆಗೆ ಡಾಮರೀಕರಣ , ಗೋಪಾಲಪುರ ವಾರ್ಡಿನ ಪುತ್ತೂರು ಎಲ್.ವಿ.ಟಿ ದೇವಸ್ಥಾನದ ಹಿಂಬದಿ ರಸ್ತೆಗೆ 10 ಲಕ್ಷ ವೆಚ್ಚದಲ್ಲಿ ಜಲ್ಲಿ ಹಾಕಿ ಪೇವರ್ ಫಿನಿಶ್ ಡಾಮರೀಕರಣ, ಗೋಪಾಲಪುರ ವಾರ್ಡಿನ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಹಿಂಬದಿ ಅಡ್ಡ ರಸೆಗೆ 10 ಲಕ್ಷ ರೂ ವೆಚ್ಚದಲ್ಲಿ ಜಲ್ಲಿ ಹಾಕಿ ಫೇವರ್ ಫಿನಿಶ್ ಡಾಮರೀಕರಣ, 50 ಲಕ್ಷ ರೂ ವೆಚ್ಚದಲ್ಲಿ ಸುಬ್ರಮಣ್ಯನಗರ ವಾರ್ಡಿನ ಅಂಬೇಡ್ಕರ್‍ನಗರ ಮುಖ್ಯ ರಸ್ತೆ ಮತ್ತು ಅಡ್ಡರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ , 50 ಲಕ್ಷ ರೂ ವೆಚ್ಚದಲ್ಲಿ ಕೊಡಂಕೂರು ವಾರ್ಡಿನ ಸುಡುಗಾಡು ಸಿದ್ಧಿ ಜನಾಂಗದ ಪ್ರಮೋದ್ ಮಧ್ವರಾಜ್ ವಸತಿ ಬಡಾವಣೆ ರಸ್ತೆ ಕಾಂಕ್ರೀಟೀಕರಣ ಹಾಗೂ ಚರಂಡಿ ರಚನೆ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.
ಹೋಟೇಲ್ ಕರಾವಳಿ ಪಕ್ಕದಲ್ಲಿರುವ ವೆಟ್‍ವೆಲ್ 3 ರಲ್ಲಿ ಡ್ರೈವೇಸ್ಟ್. ಇ-ವೇಸ್ಟ್ ಕಲೆಕ್ಷನ್ ಸೆಂಟರ್ ಉದ್ಘಾಟಸಿ , ಮ್ಯಾನ್‍ಹೋಲ್ ಗಳಲ್ಲಿ ಸಂಗ್ರಹವಾದ ಸಿಲ್ಟ್ ತೆಗೆಯುವ 9.18 ಲಕ್ಷ ರೂ ವೆಚ್ಚದ ಡಿಸಿಲ್ಟಿಂಗ್ ವಾಹನದ ಲೋಕಾರ್ಪಣೆ ಮಾಡಿದ ಸಚಿವರು, 11 ಲಕ್ಷ ರೂ ವೆಚ್ಚದ ಸಿ.ಎಸ್.ಆರ್ ಫಂಡ್‍ನಡಿಯಲ್ಲಿ ನೀಡಲಾದ ಪ್ರಾಥಮಿಕ ಕಸ ಸಂಗ್ರಹಣಾ ವಾಹನಗಳು ಹಾಗೂ 10 ಸಂಖ್ಯೆಯ ಟ್ರಾಲಿ ಸಹಿತ 40 ಲೀ ಸಾಮಥ್ರ್ಯದ ಡಸ್ಟ್‍ಬಿನ್‍ಗಳ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ, ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿಯನ್ನು ವ್ಯವಸ್ಥಿತ ರೀತಿಯಲ್ಲಿ ಅಳವಡಿಸಿ, ಉಡುಪಿ ನಗರವನ್ನು ಸ್ವಚ್ಚವಾಗಿಡಲು ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸಚಿವರು ಸೂಚಿಸಿದರು.