LATEST NEWS
ಟ್ವೀಟರ್ ಟ್ರೆಂಡಿಂಗ್ ನಲ್ಲಿ #connectustomangalore ಟ್ವೀಟರ್ ಅಭಿಯಾನ
ಟ್ವೀಟರ್ ಟ್ರೆಂಡಿಂಗ್ ನಲ್ಲಿ #connectustomangalore ಟ್ವೀಟರ್ ಅಭಿಯಾನ
ಮಂಗಳೂರು ಅಗಸ್ಟ್ 24 : ಕರಾವಳಿ ಹಾಗೂ ಘಟ್ಟ ಪ್ರದೇಶದಲ್ಲಿಯ ಭಾರಿ ಮಳೆ ಮಂಗಳೂರಿನಿಂದ ರಾಜಧಾನಿ ಬೆಂಗಳೂರು ಮತ್ತಿತರ ನಗರಗಳನ್ನು ಸಂಪರ್ಕಿಸುವ ಬಹುತೇಕ ಮಾರ್ಗಗಳನ್ನು ಮುಚ್ಚಿ ಹಾಕಿದೆ.
ಗುಡ್ಡ ಕುಸಿತ, ಜಲ ಪ್ರಳಯದಂಥ ಪಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಪೂರ್ಣ ಬಂದ್ ಆಗಿರುವುದರಿಂದ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗರು ರಸ್ತೆಯ ಸಂಪರ್ಕದ ಪರ್ಯಾಯ ಮಾರ್ಗಕ್ಕಾಗಿ ಟ್ವಿಟ್ಟರ್ ಅಭಿಯಾನ ಆರಂಭಿಸಿದ್ದಾರೆ.
#connectustomangalore ಹ್ಯಾಷ್ ಟ್ಯಾಗ್ ಜತೆ ‘ಕನೆಕ್ಟ್ ಅಸ್ ಟು ಮ್ಯಾಂಗಲೋರ್’ ಎಂಬ ಸಂದೇಶವನ್ನು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಟ್ವೀಟ್ ಮಾಡುತ್ತಿದ್ದು, ಮಂಗಳೂರಿನಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ಪರ್ಯಾಣಿಸಲು ಬೇಕಾದ ರಸ್ತೆ ಸಂಪರ್ಕವನ್ನು ಆದಷ್ಟು ಬೇಗ ಸರಿಪಡಿಸಲು ಸೇರಿದಂತೆ ಮಧ್ಯಮವರ್ಗದವರಿಗೂ ಅನುಕೂಲವಾಗುವಂತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹಕ್ಕೊತ್ತಾಯ ಮಾಡಲಾಗಿದೆ.
ಸದ್ಯ ಟ್ವೀಟರ್ ನಲ್ಲಿ ಟ್ರೆಂಡಿಂಗ್ ನಲ್ಲಿರುವ #connectustomangalore ಸಾವಿರಾರು ಟ್ವೀಟಿಗರು ಟ್ವೀಟ್ ಮಾಡುತ್ತಿದ್ದಾರೆ. ಆದಷ್ಟು ಬೇಗ ಬೆಂಗಳೂರು ಮಂಗಳೂರು ರಸ್ತೆ ಸಂಪರ್ಕವನ್ನು ಸರಿ ಮಾಡಿಸಬೇಕೆಂದು ಆಗ್ರಹ ಮಾಡುತ್ತಿದ್ದು, ಕೇವಲ 6 ಗಂಟೆಯ ಪ್ರಯಾಣ ಈಗ ಕನಸಾಗಿದ್ದು, ಆದಷ್ಟು ಬೇಗ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸುತ್ತಿದ್ದಾರೆ.