Connect with us

    BELTHANGADI

    ಪೊಲೀಸರ ಮೇಲೆ ಬಿಜೆಪಿಯ ರೌಡಿ ಎಂಎಲ್ಎ ಹರೀಶ್ ಪೂಂಜಾ ದಬ್ಬಾಳಿಕೆ ನಡೆಸಿದ್ದಾರೆ – ಕಾಂಗ್ರೇಸ್

    ಬೆಂಗಳೂರು ಮೇ 19 : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಮೇಲೆ ರೇಗಾಡಿದ ವಿಡಿಯೋ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಎಂಎಲ್ಎ ಹರೀಶ್ ಪೂಂಜಾ ಅವರ ವರ್ತನೆ ವಿರುದ್ದ ಕಾಂಗ್ರೇಸ್ ವಾಗ್ದಾಳಿ ನಡೆಸಿದ್ದು. ಬಿಜೆಪಿಯ ರೌಡಿ ಎಂಎಲ್ಎ ಹರೀಶ್ ಪೂಂಜಾ ದಬ್ಬಾಳಿಕೆ ನಡೆಸಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್‌ ‘ಎಕ್ಸ್‌’ ತಾಣದಲ್ಲಿ ಹರಿಹಾಯ್ದಿದೆ.


    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲು ಬಿಜೆಪಿ ಹಲವು ಪ್ರಯತ್ನಗಳನ್ನು ನಡೆಸುತ್ತಿದೆ. ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾಅವರು ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಅಧಿಕಾರಿಗಳಿಗೆ ಧಮಕಿ ಹಾಕುವ ಮೂಲಕ ಬಿಜೆಪಿ ಎಂದಿಗೂ ಕ್ರಿಮಿನಲ್ ಗಳ ರಕ್ಷಕರು ಎಂಬುದನ್ನು ಸಾಬೀತು ಮಾಡಿದ್ದಾರೆ. ಪೊಲೀಸರ ನೈತಿಕ ಸ್ಥೈರ್ಯವನ್ನು ಕಸಿಯುತ್ತ, ಕ್ರಿಮಿನಲ್ ಗಳಿಗೆ ಬೆಂಬಲ ನೀಡುತ್ತ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತಹ ಬಿಜೆಪಿ ಕೆಲಸಗಳಿಗೆ ಕಡಿವಾಣ ಹಾಕುವುದಕ್ಕೆ ನಮ್ಮ ಸರ್ಕಾರ ಸಮರ್ಥವಾಗಿದೆ ಎಂದು ಹೇಳಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲು ಬಿಜೆಪಿ ಹಲವು ಪ್ರಯತ್ನಗಳನ್ನು ನಡೆಸುತ್ತಿದೆ. ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾಅವರು ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಅಧಿಕಾರಿಗಳಿಗೆ ಧಮಕಿ ಹಾಕುವ ಮೂಲಕ ಬಿಜೆಪಿ ಎಂದಿಗೂ ಕ್ರಿಮಿನಲ್ ಗಳ ರಕ್ಷಕರು ಎಂಬುದನ್ನು ಸಾಬೀತು ಮಾಡಿದ್ದಾರೆ.

    ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಕ್ರಮ ದಂಧೆಕೋರರು ಹದ್ದು ಮೀರಿದ್ದರು, ಬಿಜೆಪಿಯ ರೌಡಿ ಮೋರ್ಚಾದಿಂದಾಗಿ ಕ್ರಿಮಿನಲ್ ಗಳು ಕಾನೂನಿನ ಭಯ ಕಳೆದುಕೊಂಡಿದ್ದರು. ಆದರೆ ನಮ್ಮ ಸರ್ಕಾರ ಬಿಜೆಪಿ ಅವಧಿಯಲ್ಲಿ ಹದ್ದು ಮೀರಿದ್ದವರನ್ನು ಕಠಿಣ ಕಾನೂನು ಕ್ರಮದ ಮೂಲಕ ತಹಬದಿಗೆ ತರಲಿದೆ ಎಂದಿದೆ. ಬೆಳ್ತಂಗಡಿಯಲ್ಲಿ ಬಿಜೆಪಿ ಪದಾಧಿಕಾರಿಯ ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಡೆದು ಕಾನೂನು ಕ್ರಮ ಜರುಗಿಸಿದ ಪೊಲೀಸರ ಮೇಲೆ ಬಿಜೆಪಿಯ ರೌಡಿ ಎಂಎಲ್ಎ ಹರೀಶ್ ಪೂಂಜಾ ದಬ್ಬಾಳಿಕೆ ನಡೆಸಿದ್ದಾರೆ. ಒಬ್ಬ ಶಾಸಕನ ಕೆಲಸ ಅಕ್ರಮಕೋರರನ್ನು ರಕ್ಷಿಸುವುದಾ ಅಥವಾ ಜನರ ಆಶೋತ್ತರಗಳನ್ನು ಈಡೇರಿಸುವುದಾ? ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.

    ಕಾನೂನು ಸುವ್ಯವಸ್ಥೆಯ ಬಗ್ಗೆ ಪುಂಖಾನುಪುಂಖವಾಗಿ ಆರೋಪ ಮಾಡುವ ಬೊಮ್ಮಾಯಿ ಅವರೇ, ಆರ್, ಅಶೋಕ್ ಅವರೇ, ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ದೌರ್ಜನ್ಯ ಎಸಗುವ ನಿಮ್ಮ ಶಾಸಕನ ಕಾನೂನು ವಿರೋಧಿ ನಡೆಯ ಬಗ್ಗೆ ನಿಮ್ಮ ಸಹಮತವಿದೆಯೇ? ನಿಮ್ಮ ಸರ್ಕಾರದ ಅವಧಿಯಲ್ಲಿ ಇಂತಹ ಅಕ್ರಮಗಳನ್ನು ಪಾಲನೆ, ಪೋಷಣೆ ಮಾಡಿದ್ದರ ಪರಿಣಾಮ ಅಕ್ರಮಗಳು ಮಿತಿ ಮೀರಿದ್ದವಲ್ಲವೇ? ಕ್ರಿಮಿನಲ್ ಗಳಿಗೆ, ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ ಬೆಂಬಲಿಸುವ ಬಿಜೆಪಿಗೆ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನೆ ಮಾಡುವ ನೈತಿಕತೆ ಇಲ್ಲ ಎಂದು ಹೇಳಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *