Connect with us

LATEST NEWS

ಕಾಂಗ್ರೇಸ್ಸಿಗರ ಕೈಗೆ ಲಾಠಿ ಕೊಟ್ಟ ಮಾಜಿ ಸಚಿವ ಯು.ಟಿ ಖಾದರ್

ಕಾಂಗ್ರೇಸ್ಸಿಗರ ಕೈಗೆ ಲಾಠಿ ಕೊಟ್ಟ ಮಾಜಿ ಸಚಿವ ಯು.ಟಿ ಖಾದರ್

ಮಂಗಳೂರು ಸೆಪ್ಟೆಂಬರ್ 27: ಅಕ್ಟೋಬರ್ 2 ರಂದು ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮಕ್ಕಾಗಿ ಕಾಂಗ್ರೇಸ್ ಪಾಳಯದಲ್ಲಿ ಸಿದ್ದತೆ ಜೋರಾಗಿ ನಡೆಯುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲೂ ಕೂಡ ಸಿದ್ದತೆ ನಡೆದಿದ್ದು, ಕಾಂಗ್ರೇಸ್ ನ ಕಾರ್ಯಕರ್ತರ ಸಿದ್ದತೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗಾಂಧಿ ಜಯಂತಿ ಹಿನ್ನಲೆಯಲ್ಲಿ ಅಕ್ಟೋಬರ್ 2 ರಂದು ಮಂಗಳೂರಿಗೆ ಗಾಂಧಿ ನಡಿಗೆ ಕಾರ್ಯಕ್ರಮವನ್ನು ಕಾಂಗ್ರೇಸ್ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಪೂರ್ವ ಸಿದ್ದತೆ ನಡೆಯುತ್ತಿದ್ದು, ನಡಿಗೆ ಕಾರ್ಯಕ್ರಮದಲ್ಲಿ ಮಾರ್ಚ್ ಪಾಸ್ಟ್ ಗೆ ಲಾಠಿ ಹಿಡಿದು ಕಾಂಗ್ರೇಸ್ ಕಾರ್ಯಕರ್ತರು ಸಿದ್ಧತೆ ನಡೆಸುತ್ತಿದ್ದಾರೆ.

ಮಾಜಿ ಸಚಿವ ಯು.ಟಿ ಖಾದರ್ ಅವರ ನೇತೃತ್ವದಲ್ಲಿ ಈ ಸಿದ್ದತೆ ನಡೆಯುತ್ತಿದ್ದು, ಆರ್ ಎಸ್ ಎಸ್ ನ ರೀತಿಯಲ್ಲೇ ಕಾಂಗ್ರೇಸ್ ಕಾರ್ಯಕರ್ತರಿಗೆ ಲಾಠಿ ನೀಡಿ ಮಾರ್ಚ್ ಫಾಸ್ಟ್ ನ ಟ್ರೈನಿಂಗ್ ನ್ನು ಮಾಜಿ ಸಚಿವ ಯು.ಟಿ.ಖಾದರ್ ನೀಡುತ್ತಿದ್ದಾರೆ. ಈ ಮಾರ್ಚ್ ಫಾಸ್ಟ್ ನಲ್ಲಿ ಟ್ರೈನಿಂಗ್ ನಲ್ಲಿ ಕಾಂಗ್ರೇಸ್ ಜನಪ್ರತಿನಿಧಿಗಳು‌ ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದು, ಆರ್.ಎಸ್.ಎಸ್ ನಂತೆ ಲಾಠಿ ಹಿಡಿದು ತಾಲೀಮು ನಡೆಸುತ್ತಿದ್ದಾರೆ.

ಈ ಮಾರ್ಚ್ ಪಾಸ್ಟ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೇಸ್ ಮಾರ್ಚ್ ಫಾಸ್ಟ್, ಗೇಲಿಗೆ ಗುರಿಯಾಗಿದೆ.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *