LATEST NEWS
ಬಜೆಟ್ ನಲ್ಲಿ ಕರಾವಳಿಗರ ವಿರುದ್ದ ಹಗೆ ತೀರಿಸಿದ ಕಾಂಗ್ರೇಸ್
ಬಜೆಟ್ ನಲ್ಲಿ ಕರಾವಳಿಗರ ವಿರುದ್ದ ಹಗೆ ತೀರಿಸಿದ ಕಾಂಗ್ರೇಸ್
ಮಂಗಳೂರು ಜುಲೈ 5: ರಾಜ್ಯದ ಮೈತ್ರಿ ಸರಕಾರದ ಚೊಚ್ಚಲ ಬಜೆಟ್ ಇಂದು ಮಂಡನೆಯಾಗಿದೆ. ಮೈತ್ರಿ ಸರಕಾರದ ಮುಖ್ಯಮಂತ್ರಿ ಎಚ್.ಡಿ ಕುಮಾರ್ ಸ್ವಾಮಿ ವಿಧಾನಸೌಧದಲ್ಲಿ ಇಂದು ತಮ್ನ ಚೊಚ್ಚಲ ರಾಜ್ಯ ಬಜೆಟ್ ಮಂಡನೆ ಮಾಡಿದರು. ಸುಧೀರ್ಘ ಎರಡು ಘಂಟೆಗೂ ಹೆಚ್ಚು ಕಾಲ ಬಜೆಟ್ ಮಂಡನೆ ಮಾಡಿದ ಕುಮಾರ್ ಸ್ವಾಮಿ ಬಜೆಟ್ ನಲ್ಲಿ ಎಲ್ಲಿಯೂ ಕರಾವಳಿಯ ಅಭಿವೃದ್ದಿಗೆ ಒತ್ತು ನೀಡದಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ.
ಸಂಪೂರ್ಣ ಬಜೆಟ್ ನಲ್ಲಿ ಎಲ್ಲಿಯೂ “ಕರಾವಳಿ ” ಅನ್ನುವ ಪದವನ್ನೇ ಬಳಸದ ಕುಮಾರ ಸ್ವಾಮಿ ಚುನಾವಣೆಯ ಫಲಿತಾಂಶದ ಪ್ರತಿಕಾರ ತೀರಿಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಕಳೆದ ಚುನಾವಣೆಯಲ್ಲಿ ಕರಾವಳಿಯುದ್ದಕ್ಕೂ ಕಾಂಗ್ರೇಸ್ ಹಿನಾಯ ಸೋಲನುಭವಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಎಳರಲ್ಲಿ ಬಿಜೆಪಿ ಗೆಲವು ಸಾಧಿಸಿದೆ. ಉಡುಪಿಯಲ್ಲಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲವೂ ಬಿಜೆಪಿ ತೆಕ್ಕೆಗೆ ಬಿದ್ದಿದೆ.
ಈ ಹಿನ್ನಲೆಯಲ್ಲಿ ಕಾಂಗ್ರೇಸ್ ಕರಾವಳಿಯ ಜನರ ಮೇಲೆ ತನ್ನ ಹಗೆ ಸಾಧಿಸಿದೆ ಎಂದು ಆರೋಪಿಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮುಖಾಂತರ ಕರಾವಳಿಗೆ ಯಾವುದೇ ಅಭಿವೃದ್ದಿ ಯೋಜನೆಗಳು ಬಾರದಂತೆ ಕಾಂಗ್ರೇಸ್ ನೇತೃತ್ವ ವಹಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಬಜೆಟ್ ನ ಈ ನಿರ್ಲಕ್ಷ್ಯ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರಾವಳಿಗರೂ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ಶಾಸಕರು ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್ ಮಂಡನೆ ಕೊನೆಯಾಗುತ್ತಿದ್ದಂತೆ ಕರಾವಳಿ ಭಾಗದ ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ವಿಧಾನಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಭಾಧ್ಯಕ್ಷ ರಮೇಶ್ ಕುಮಾರ್ ನಾಳೆಗೆ ಬಜೆಟ್ ಮೇಲಿನ ಚರ್ಚೆ ಮುಂದೂಡಿದ್ದಾರೆ.
ನಾಳೆ ನಡೆಯುವ ಅಧಿವೇಶನದಲ್ಲಿ ಬಜೆಟ್ ನಲ್ಲಿ ಕರಾವಳಿಯ ನಿರ್ಲಕ್ಷ್ಯದ ಕುರಿತು ಗಂಭೀರ ಚರ್ಚೆಗಳು ನಡೆಯಲಿದ್ದು ಕರಾವಳಿ ಭಾಗದ ಶಾಸಕರು ಸದನದಲ್ಲಿ ರೊಚ್ಚಿಗೇಳುವ ಸ್ಥಿತಿ ಇದೆ.