LATEST NEWS
ಸಚಿವ ಸಾ.ರಾ ಮಹೇಶ್ ಜೊತೆ ದುರಂಹಕಾರದಿಂದ ವರ್ತಿಸಿದ ನಿರ್ಮಲಾ ಸೀತಾರಾಮನ್ – ಜೈವೀರ್ ಶೆರ್ಗಿಲ್

ಸಚಿವ ಸಾ.ರಾ ಮಹೇಶ್ ಜೊತೆ ದುರಂಹಕಾರದಿಂದ ವರ್ತಿಸಿದ ನಿರ್ಮಲಾ ಸೀತಾರಾಮನ್ – ಜೈವೀರ್ ಶೆರ್ಗಿಲ್
ಮಂಗಳೂರು ಅಗಸ್ಟ್ 27: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಡೆಸಿರುವ ಹಗರಣದಿಂದ ಕರ್ನಾಟಕಕ್ಕೆ 1.60 ಲಕ್ಷ ಕೋಟಿಯಷ್ಟು ನಷ್ಟವಾಗಿದೆ’ ಎಂದು ಎಐಸಿಸಿ ವಕ್ತಾರ ಹಾಗೂ ಚುನಾವಣಾ ಪ್ರಚಾರ ಸಮಿತಿ ಸದಸ್ಯ ಜೈವೀರ್ ಶೆರ್ಗಿಲ್ ಆರೋಪಿಸಿದರು
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 126 ಯುದ್ಧ ವಿಮಾನಗಳ ಖರೀದಿ ಮತ್ತು ಅವುಗಳ ಶಾಶ್ವತ ನಿರ್ವಹಣೆಯ ಗುತ್ತಿಗೆಯನ್ನು ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಸಂಸ್ಥೆಯಿಂದ ಕಿತ್ತುಕೊಂಡು ಪ್ರಧಾನಿಯವರ ಸ್ನೇಹಿತ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಂಪೆನಿಗೆ ನೀಡಲಾಗಿದೆ. ಈ ಹಗರಣ ಕರ್ನಾಟಕದಲ್ಲಿ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯ ಅವಕಾಶಗಳನ್ನು ಕಿತ್ತುಕೊಂಡಿದೆ ಎಂದು ಆರೋಪಿಸಿದರು.

ಮಡಿಕೇರಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಸ್ತುವಾರಿ ಸಚಿವರ ಜೊತೆ ದುರಂಹಕಾರದಿಂದ ವರ್ತಿಸಿದ್ದಾರೆ ಎಂದು ಎಐಸಿಸಿ ವಕ್ತಾರ ಜೈವೀರ್ ಶೆರ್ಗಿಲ್ ಆರೋಪಿಸಿದ್ದಾರೆ. ಕರ್ನಾಟಕದ ಮಂತ್ರಿಗಳ ಜೊತೆ ದುರಂಹಕಾರ ಪ್ರದರ್ಶಿಸುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇದೇ ಅಹಂಕರಾವನ್ನು ರಫೇಲ್ ವಿಚಾರದಲ್ಲೂ ಪ್ರದರ್ಶಿಸಲಿ ಎಂದರು. ರಫೇಲ್ ವಿಚಾರದಲ್ಲಿ ರಕ್ಷಣಾ ಸಚಿವರು ಈಗಾಗಲೇ ಮೂರು ಬಾರಿ ಹೇಳಿಕೆಯನ್ನು ಬದಲಿಸಿದ್ದಾರೆ ಎಂದು ಎಐಸಿಸಿ ವಕ್ತಾರ ಹಾಗೂ ಚುನಾವಣಾ ಪ್ರಚಾರ ಸಮಿತಿ ಸದಸ್ಯ ಜೈವೀರ್ ಶೆರ್ಗಿಲ್ ಆರೋಪಿಸಿದ್ದಾರೆ.