Connect with us

BANTWAL

ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಬಂಧನಕ್ಕೆ ಒತ್ತಾಯ…

ಬಂಟ್ವಾಳ ನವೆಂಬರ್ 10:  ಬಿಜೆಪಿ ಪಕ್ಷದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಿ . ರಮಾನಾಥ ರೈ ಯವರು ಶರತ್ ಮಡಿವಾಳ ನನ್ನು ಕೊಲೆ ಮಾಡಿದವರು ಎಂದು ನೇರ ಆರೋಪ ಮಾಡಿ ಸದ್ರಿ ಭಾಷಣದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಯೋನಿಕ್ಸ್ ರಾಜ್ಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ವಿರುದ್ದ ಕಾಂಗ್ರೇಸ್ ನಿಯೋದ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.


ಹರಿಕೃಷ್ಣ ಬಂಟ್ವಾಳ ಅವರು ರಮಾನಾಥ ರೈ ವಿರುದ್ಧ ಕೊಲೆ ಆರೋಪ ಮಾಡುವ ಮೂಲಕ ಜಿಲ್ಲೆಯಲ್ಲಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ್ದಾರೆ. ಪ್ರಚೋದನಕಾರಿ ಭಾಷಣ ಮಾಡಿದ ಅವರನ್ನು ಮತ್ತು ಭಾಷಣದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ನಿಯೋಗದಲ್ಲಿ ಇದ್ದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಪೊಲೀಸರನ್ನು ಒತ್ತಾಯಿಸಿದ್ದಾರೆ.


ಹರಿಕೃಷ್ಣ ಬಂಟ್ವಳ ಅವರ ಆರೋಪದಿಂದ ರಮಾನಾಥ ರೈ ಅವರ ಘನತೆಗೆ ಧಕ್ಕೆ ಉಂಟಾಗಿದೆ. ಅಲ್ಲದೆ ರೈ ಅವರ ಜೀವಕ್ಕೂ ಅಪಾಯ ಇದೆ. ಶರತ್ ಮಡಿವಾಳ ಅವರ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿ ಬಳಿಕ ಆರೋಪಿಗಳು ಜಾಮೀನು ಮೇಲೆ ಬಿಡುಗಡೆ ಗೊಂಡಿದ್ದಾರೆ. ಕೊಲೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇದೆ. ಆದರೂ ರಮಾನಾಥ ರೈ ಕೊಲೆ ಮಾಡಿದ್ದಾರೆ ಎಂಬ ಅವರ ಆರೋಪ ಅಪರಾಧವಾಗಿದ್ದು ಕೂಡಲೇ ಅವರನ್ನು ಬಂಧಿಸಬೇಕು ಎಂದು ಬೇಬಿ ಕುಂದರ್ ಆಗ್ರಹಿಸಿದ್ದಾರೆ

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *