LATEST NEWS
ಕಾಂಗ್ರೇಸ್ ಮುಖಂಡರ ಕಾರಿನಲ್ಲಿ ಹಣ ಸಾಗಾಟ

ಕಾಂಗ್ರೇಸ್ ಮುಖಂಡರ ಕಾರಿನಲ್ಲಿ ಹಣ ಸಾಗಾಟ
ಮಂಗಳೂರು ಮೇ 11: ಕಾಂಗ್ರೆಸ್ ಮುಖಂಡರ ಕಾರಿನಲ್ಲಿ ಹಣ ಸಾಗಾಟ ಶಂಕೆ ಹಿನ್ನಲೆಯಲ್ಲಿ ಕಾರನ್ನು ಬಿಜೆಪಿ ಕಾರ್ಯಕರ್ತರು ತಡೆ ಹಿಡಿದಿರುವ ಘಟನೆ ನಡೆದಿದೆ.
ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ಪಿಲಾರ್ ಲಕ್ಷ್ಮೀ ಗುಡ್ಡ ಪರಿಸರದಲ್ಲಿ ಈ ಘಟನೆ ನಡೆದಿದ್ದು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಕಾರಿನಲ್ಲಿ ಹಣ ಸಾಗಾಟ ಮಾಡುತ್ತಿದ್ದಾರೆ ಎಂಬ ಸಂಶಯದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾರನ್ನು ತಡೆ ಹಿಡಿದಿದ್ದರು. ನೂರಾರು ಕಾರ್ಯಕರ್ತರು ಸ್ಥಳದಲ್ಲಿ ಜಮಾವಣೆಗೊಂಡಿದ್ದು, ಪೊಲೀಸರು ಸ್ಥಳಕ್ಕೆ ಬಾರದೆ ಕಾರನ್ನು ಬಿಡದಿರಲು ನಿರ್ಧರಿಸಿದ್ದಾರೆ.

Continue Reading