Connect with us

LATEST NEWS

ಸಭಾಪತಿಯವರ ಕುತ್ತಿಗೆಗೆ ಕೈ ಹಾಕಿ ಗೊಂದಲ ಸೃಷ್ಠಿಸಿದ್ದು ಕಾಂಗ್ರೇಸ್ – ಕೋಟ ಶ್ರೀನಿವಾಸ ಪೂಜಾರಿ

ಉಡುಪಿ ಡಿಸೆಂಬರ್ 17: ವಿಧಾನ ಪರಿಷತನಲ್ಲಿ ನಡೆದ ಗಲಾಟೆಗೆ ಕಾಂಗ್ರೆಸ್‌ ಪಕ್ಷ ಸಭಾಪತಿ ಸ್ಥಾನವನ್ನು ಕಾಂಗ್ರೇಸಿಕರಣ ಮಾಡಿರುವುದೇ ಮುಖ್ಯಕಾರಣವಾಗಿದ್ದು, ರಾಜ ಧರ್ಮ‌ಪಾಲಿಸ‌ ಬೇಕಾದ ಕಾಂಗ್ರೆಸ್ ಸಭಾಪತಿಯವರ ಕುತ್ತಿಗೆಗೆ ಕೈ ಹಾಕಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.


ಉಡುಪಿಯಲ್ಲಿ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷ ಸಭಾಪತಿ ಸ್ಥಾನವನ್ನು ಕಾಂಗ್ರೇಸೀಕರಣ ಮಾಡಿ ರಾಜಕೀಯ ಮಾಡಿದ್ದು, ಸಭಾಪತಿಯವರನ್ನು ನಿಯಂತ್ರಣ ಮಾಡುವುದನ್ನು ಬಿಟ್ಟಿದ್ದರೆ ಈ ಗೊಂದಲ ನಿರ್ಮಾಣವಾಗುತ್ತಿರಲಿಲ್ಲ ಎಂದರು. ಮೊನ್ನೆ ನಡೆದಿರುವ ಎಲ್ಲಾ ಗೊಂದಲಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಆರೋಪಿಸಿದರು.

ಈ ಹಿಂದೆ ಡಿಎಚ್ ಶಂಕರಮೂರ್ತಿ ಅವರು ಸಭಾಪತಿ ಆಗಿದ್ದ ಸಮಯದಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಶಂಕರಮೂರ್ತಿಯವರು ಉಪಸಭಾಪತಿ ಅವರಿಗೆ ಪೀಠ ಬಿಟ್ಟುಕೊಟ್ಟು ನಡಾವಳಿ ಅನುಸರಿಸಿದ್ದರು. ಅವಿಶ್ವಾಸ ಗೊತ್ತುವಳಿ ಬಿದ್ದು ಹೋದ ಬಳಿಕ ಮತ್ತೆ ಸಭಾಪತಿ ಪೀಠ ಅಲಂಕರಿಸಿದ್ದರು. ಆದರೆ ಈ ಬಾರಿ ಕಾನೂನನ್ನು ಸಂಪೂರ್ಣ ಗಾಳಿಗೆ ತೂರಿ ರಾಜಕೀಯ ಮಾಡಲಾಯಿತು. ರಾಜಧರ್ಮ‌ ಪಾಲಿಸ‌ ಬೇಕಾದ ಕಾಂಗ್ರೆಸ್ ಉಪ ಸಭಾಪತಿಯವರ ಕುತ್ತಿಗೆಗೆ ಕೈ ಹಾಕಿ ಗೊಂದಲ ಸೃಷ್ಟಿಸಿದ್ದಾರೆ.ರಾಜ್ಯಪಾಲರ ಮೊರೆ ಹೋಗಿದ್ದೇವೆ, ಮತದಾನಕ್ಕೆ ಅವಕಾಶವನ್ನು ಕೋರಿದ್ದು, ಸಭಾಪತಿ ಯಾರು ಆಗಬೇಕು ಅಂತ ಪಕ್ಷ ತೀರ್ಮಾನಿಸುತ್ತದೆ ಎಂದರು.

ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾಯ್ದೆ ಸಂಬಂಧಪಟ್ಟಂತೆ ಸರ್ಕಾರಕ್ಕೆ ಲವ್ ಜಿಹಾದ್ ನಿಯಂತ್ರಣ ತರುವ ಕಾಯ್ದೆ ತರಬೇಕೆಂಬ ಮನಸ್ಸಿದೆ. ಆದರೆ ಸುಗ್ರಿವಾಜ್ಞೆ ಮೂಲಕ ಕಾನೂನು ತರಲಾಗುವುದಿಲ್ಲ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *