LATEST NEWS
ಕಾಂಗ್ರೇಸ್ ಮತ್ತು ಎಸ್.ಡಿ.ಪಿ.ಐ ಒಂದೇ ನಾಣ್ಯದ ಎರಡು ಮುಖಗಳು – ಶಾಸಕ ಕಾಮತ್

ಕಾಂಗ್ರೇಸ್ ಮತ್ತು ಎಸ್.ಡಿ.ಪಿ.ಐ ಒಂದೇ ನಾಣ್ಯದ ಎರಡು ಮುಖಗಳು – ಶಾಸಕ ಕಾಮತ್
ಮಂಗಳೂರು ಫೆಬ್ರವರಿ 28: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಉಪ ಮೇಯರ್ ಆಯ್ಕೆಯ ಸಂಧರ್ಭದಲ್ಲಿ ಕಾಂಗ್ರೇಸ್ ಪಕ್ಷದಿಂದ ಚುನಾಯಿತರಾದ ಜೀನತ್ ಶಂಶುದ್ದೀನ್ ಪರವಾಗಿ ಎಸ್.ಡಿ.ಪಿ.ಐ ಸದಸ್ಯರು ಮತ ಚಲಾಯಿಸಿದ್ದಾರೆ.
ಚುನಾವಣೆ ಬಂದಾಗ ನಮಗೂ ಅವರಿಗೂ ಸಂಬಂಧವೇ ಇಲ್ಲವೆನ್ನುವ ಕಾಂಗ್ರೇಸ್ ಮುಖಂಡರು ಎಸ್.ಡಿ.ಪಿ.ಐ ಜೊತೆಗಿನ ಒಳ ಒಪ್ಪಂದದ ಕುರಿತು ಮೌನ ಮುರಿಯಬೇಕು ಎಂದಿದ್ದಾರೆ.

ರಾಜಕೀಯ ಲಾಭಕ್ಕಾಗಿ ನಮಗೂ ಅವರಿಗೂ ಸಂಬಂಧವೇ ಇಲ್ಲವೆನ್ನುತ್ತಾ ಜನರ ಕಣ್ಣಿಗೆ ಮಣ್ಣೆರಚುವ ಬದಲು ನೇರವಾಗಿ ತಮ್ಮ ರಾಜಕೀಯ ಒಳ ಒಪ್ಪಂದದ ಕುರಿತು ಸಾರ್ವಜನಿಕವಾಗಿ ಒಪ್ಪಿಕೊಂಡು ಚುನಾವಣಾ ಕಣಕ್ಕಿಳಿಯಬೇಕು. ಅದಲ್ಲದೆ ಜನರ ಮುಂದೆ ಬೇರೆ ಬೇರೆಯಾಗಿ ಚುನಾವಣೆ ಎದುರಿಸಿ ಅಧಿಕಾರದ ಅಭಿಲಾಶೆಯಿಂದ ಒಂದಾಗುವ ನಾಕಟೀಯ ಬೆಳವಣಿಗೆಗಳು ಕಾಂಗ್ರೇಸ್ ಮುಖಂಡರಿಗೆ ಶೋಭೆ ತರುವುದಿಲ್ಲ ಎಂದು ಶಾಸಕ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.