Connect with us

    LATEST NEWS

    ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು – ರಾಜನಾಥ್ ಸಿಂಗ್

    ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು – ರಾಜನಾಥ್ ಸಿಂಗ್

    ಉಡುಪಿ ಎಪ್ರಿಲ್ 23: ಕಾಂಗ್ರೇಸ್ ಹಾಗೂ ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.

    ಇಂದು ಕಾರ್ಕಳದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾನತನಾಡಿದ ಅವರು ಕಾರ್ಕಳ ಬಂಧುಭಗಿನಿಯರಿಗೆ ಶುಭಾಶಯಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಇದು ಕರ್ನಾಟಕ ವಿಧಾನಸಭಾ ಚುನಾವಣೆಯ ನನ್ನ ಪ್ರಥಮ ಭಾಷಣವಾಗಿದ್ದು ನಾನು ಪ್ರಥಮ ಚುನಾವಣಾ ಭಾಷಣ ಮಾಡಿದಲ್ಲಿ ಬಿಜೆಪಿ ಅತಿ ಹೆಚ್ಚು‌ಮತ ಗಳಿಸಿದ್ದು, ಕಾರ್ಕಳದಲ್ಲೂ ಬಿಜೆಪಿ ಅತಿ ಹೆಚ್ಚು ಮತ ಪಡೆದು ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.

    ಕರ್ನಾಟಕದಲ್ಲಿ‌ ಬಿಜೆಪಿ ಗೆಲ್ಲುವುದು ಬಹುಮುಖ್ಯವಾಗಿದ್ದು, ಈ ಬಾರಿ ಯಡ್ಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬಂದೇ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಕಾಂಗ್ರೇಸ್ ಗೆ ಬಹುಮತ ಕೊಟ್ಟ ಮತದಾರ ಸರಕಾರ ರಚಿಸಿದ ಒಂದು ವರ್ಷದೊಳಗೆ ಕಾಂಗ್ರೇಸ್ ತಿರಸ್ಕರಿಸಿ, ಲೋಕಸಭೆಯಲ್ಲಿ ಬಿಜೆಪಿಗೆ ಗೆಲುವು ಕೊಟ್ಟಿದ್ದಾನೆ ಎಂದು ಹೇಳಿದರು.

    ಹದಿಮೂರನೇ ಹಣಕಾಸು ಆಯೋಗ ಅತೀ ಹೆಚ್ಚು ಅನುದಾನವನ್ನು ಕರ್ನಾಟಕಕ್ಕೆ ನೀಡಿದೆ, ಆದರೆ ದೇಶ ಅಭಿವೃದ್ದಿಯಲ್ಲಿ ಸಾಗುತ್ತಿದ್ದರೂ ಕರ್ನಾಟಕ ಮಾತ್ರ ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿದೆ. ಕೇಂದ್ರ ಸರಕಾರ ನೀಡಿದ ಅನುದಾನ ಬಳಸಿಕೊಳ್ಳಲು ಕಾಂಗ್ರೇಸ್ ಸರಕಾ ಸಂಪೂರ್ಣ ವಿಫಲವಾಗಿದ್ದು, ಕೇಂದ್ರ ನೀಡಿದ ಅನುದಾನದ ಹಣವೆಲ್ಲಾ ಕಾಂಗ್ರೆಸ್ ಭೃಷ್ಡಾಚಾರಿಗಳ ಪಾಲಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಮತ್ತು ಭೃಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು ಇದ್ದ ಹಾಗೆ ಎಂದು ಹೇಳಿದರು.

    ಮೊದಿ ನೇತೃತ್ವದಲ್ಲಿ ದೇಶ ಫಾಸ್ಟೆಸ್ಟ್ ಗ್ರೋಯಿಂಗ್ ಎಕಾನಮಿ ಆಗಿದೆ, ವಾಜಪೇಯಿ, ಮೋದಿ ಸರ್ಕಾರದಲ್ಲಿ ಭೃಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ ಎಂದು ತಿಳಿಸಿದರು.  ರಾಜ್ಯದಲ್ಲಿ ಟಿಪ್ಪುಜಯಂತಿ ವಿವಾದ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ ರಾಜನಾಥ್ ಸಿಂಗ್ ಯಾರ ಜಯಂತಿನಾದ್ರೂ ಮಾಡಿ ಆದರೆ ಹನುಮಾನ್ ಜಯಂತಿಗೆ ಯಾಕೆ ಅಡ್ಡಿ ಮಾಡ್ತೀರಿ ಎಂದು ಕೇಳಿದರು.

    ಅಭಿವೃದ್ದಿಯ ವಿಷಯದಲ್ಲಿ ಚರ್ಚೆ ಮಾಡುವುಗು ಕಾಂಗ್ರೇಸ್ ಗೆ ಬೇಡವಾಗಿದ್ದು, ಅನಗತ್ಯ ವಿಚಾರಗಳ ಬಗ್ಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಆಸಕ್ತಿ ಇದೆ ಎಂದು ಆರೋಸಿದರು. ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ ಸಾಧನೆ ಕರ್ನಾಟಕ ಮರೆಯಲು ಸಾಧ್ಯವಿಲ್ಲ, ಯಡ್ಯೂರಪ್ಪ ಶೂನ್ಯ ಬಡ್ಡಿಯ ಸಾಲ ನೀಡಿ ಕ್ರಾಂತಿ ಮಾಡಿದರು. ಆದ್ರೆ ಸಿದ್ದರಾಮಯ್ಯ ರೈತರ ಆತ್ಮಹತ್ಯೆಗೆ ಒಂದು ಲಕ್ಷ ಪರಿಹಾರ ನೀಡ್ತೇನೆ ಎಂದು ಹೇಳಿ ಈ ಮೂಲಕ ರೈತರ ಸಾವನ್ನು ರಾಜ್ಯ ಸರಕಾರ ಎದುರು ನೋಡುತ್ತಿದೆ ಎಂದು ಆರೋಪಿಸಿದರು.

    ಕೇಂದ್ರ ಸರಕಾರ ರೈತರ ಆದಾಯವನ್ನು ಒಂದುವರೆ ಪಟ್ಡು ಹೆಚ್ಚಿಸೋದು ಬಿಜೆಪಿ ಗುರಿಯಾಗಿದೆ ಎಂದು ತಿಳಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *