KARNATAKA
9 ಮತ್ತು 10ನೇ ತರಗತಿ ಮಕ್ಕಳ ಬ್ಯಾಗ್ ನಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ….!!
ಬೆಂಗಳೂರು ನವೆಂಬರ್ 30: ಶಾಲೆಗೆ ಬರುವ ಮಕ್ಕಳು ಮೊಬೈಲ್ ತರುವ ಬಗ್ಗೆ ಬ್ಯಾಗ್ ಪರಿಶೀಲನೆ ಇಳಿದ ಶಿಕ್ಷಕರ ತಂಡವೊಂದಕ್ಕೆ ಶಾಕ್ ಎದುರಾಗಿದೆ. ಹಲವು ಶಾಲಾ ಮಕ್ಕಳ ಬ್ಯಾಗಳಲ್ಲಿ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿವೆ.
ಇದರ ಜೊತೆಗೆ ಸಿಗರೇಟ್, ಲೈಟರ್, ಫೆವಿಕಾಲ್ ಮುಂತಾದ ವಸ್ತುಗಳು ಸಹ ಸಿಕ್ಕಿವೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬ್ಯಾಗ್ ಗಳಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಪತ್ತೆಯಾಗಿದ್ದು, ಈ ಬಗ್ಗೆ ಎಚ್ಚರವಹಿಸುವಂತೆ ಶಾಲಾ ಆಡಳಿತ ಮಂಡಳಿಗಳು ಪೋಷಕರಿಗೆ ಸೂಚನೆ ನೀಡಿದ್ದಾರೆ.
ತರಗತಿಗೆ ವಿದ್ಯಾರ್ಥಿಗಳು ಮೊಬೈಲ್ ಫೋನ್ ತರುತ್ತಾರೆ ಎಂದು ಕೆಲವು ಶಿಕ್ಷಕರು ನೀಡಿದ ದೂರಿನ ಮೇರೆಗೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸಲು ಕೆಲವು ಶಾಲೆಗಳು ಆರಂಭಿಸಿವೆ. ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಕೂಡ ತನ್ನ ಸದಸ್ಯ ಶಾಲೆಗಳಿಗೆ ಸೂಚಿಸಿತ್ತು. ಕಾಮ್ಸ್‌ನ ಶೇ 80ರಷ್ಟು ಸದಸ್ಯ ಶಾಲೆಗಳು ದಿಢೀರ್ ಆಗಿ ತಮ್ಮ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸಿ ಮಾಹಿತಿ ನೀಡಿವೆ. ವಿಧ್ಯಾರ್ಥಿಗಳ ಬ್ಯಾಗ್ ನಲ್ಲಿ ಸೆಲ್ ಫೋನ್‌ಗಳಲ್ಲದೆ, ಕಾಂಡೋಮ್‌ಗಳು, ಗರ್ಭನಿರೋಧಕಗಳು, ಲೈಟರ್‌ಗಳು, ಸಿಗರೇಟ್‌ಗಳು, ವೈಟ್‌ನರ್‌ಗಳು ಮತ್ತು ದೊಡ್ಡ ಮೊತ್ತದ ಹಣ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಕೊರೊನಾ ನಂತರ ಮಕ್ಕಳ ಕೈಗೆ ಮೊಬೈಲ್ ಬಂದಿದೆ. ಅದರ ಮೂಲಕ ಕೆಟ್ಟ ಅಶ್ಲೀಲ ವೆಬ್ಸೈಟ್ಗಳ ಪರಿಚಯವಾಗಿರುತ್ತದೆ. ಸಹವಾಸ ದೋಷದಿಂದಲೂ ಮಕ್ಕಳು ತಪ್ಪು ಹಾದಿ ಹಿಡಿಯುತ್ತಾರೆ. ವಿದ್ಯಾರ್ಥಿಗಳ ಮನಸ್ಸು ಲೈಂಗಿಕತೆ ಕಡೆ ತಿರುಗಿದರೆ ಓದು ಸಾಧ್ಯವಾಗುವುದಿಲ್ಲ. ಪೋಷಕರ ನಿರಂತರ ಗಮನದಿಂದ ಮಾತ್ರ ಮಕ್ಕಳನ್ನು ಕಾಪಾಡಲು ಸಾಧ್ಯ ಎಂದು ಮನೋವೈದ್ಯರು ತಿಳಿಸಿದ್ದಾರೆ.