Connect with us

FILM

ಕಂಪೌಂಡ್ ಕಿರುಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ : ಮುಂದಿನ ಭಾನುವಾರ ಚಿತ್ರ ಬಿಡುಗಡೆಗೆ ಸಜ್ಜು

ಮಂಗಳೂರು: ಆರ್ ಕೆ ಮಂಗಳೂರು ನಿರ್ದೇಶನದ ಚೊಚ್ಚಲ ಕಿರುಚಿತ್ರ ಕಂಪೌಂಡ್ ಕಿರುಚಿತ್ರ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ನವೀನ್ ಡಿ ಪಡೀಲ್ ಬಿಡುಗಡೆಗೊಳಿಸಿ , ಚಿತ್ರತಂಡಕ್ಕೆ ಶುಭಾಷಯ ತಿಳಿಸಿದರು.


ಶ್ರೀ ದುರ್ಗಾ ಸಾನಿಧ್ಯ ಬ್ಯಾನರ್ ಅಡಿಯಲ್ಲಿ ಮೂಡಿಬಂದ ಮಕ್ಕಳ ಚಿತ್ರವಾಗಿದ್ದು ನಿರ್ಮಾಪಕ ವೀರೇಂದ್ರ ಸುವರ್ಣ ಕಟೀಲ್ ಹಾಗೂ ಪ್ರೊಡಕ್ಷನ್ ಕಂಟ್ರೋಲರ್ ಶರ್ಮಿಳಾ ಸುವರ್ಣ ನಿರ್ಮಾಣದಲ್ಲಿ ಮೂಡಿ ಬಂದ ಕಂಪೌಂಡ್ ಕಿರುಚಿತ್ರವು ಮುಂದಿನ ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಆರ್ ಕೆ ಮಂಗಳೂರು ಸ್ಟುಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಬಿಡುಗಡೆ ಆಗಲಿದೆ.

ಕನ್ನಡ ತುಳು ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಪಡೆದ ಬಾಲನಟ ಧನ್ವಿತ್ ವಿ ಸುವರ್ಣ ಕಟೀಲ್ ಕಿರುಚಿತ್ರ ಕಂಪೌಂಡ್ ನಲ್ಲಿ ನಟನೆ ಮಾಡಿದ್ದು. ಕರೋನಾ ಕಾಲದಲ್ಲಿ ಮಕ್ಕಳು ಅನುಭವಿಸಿದ ಸಂಕಷ್ಟವನ್ನು ಈ ಕಿರುಚಿತ್ರದಲ್ಲಿ ಬಿಚ್ಚಿಡಲಾಗಿದೆ ಇದೊಂದು ನೈಜ ಕಥಾಹಂದರವಾಗಿದೆ. ಧನ್ವಿತ್ ಸುವರ್ಣ ಇದಾಗಲೇ ಗುಂಡಾಡಿ ಗುಂಡ ಎನ್ನುವ ಕಿರು ಮಕ್ಕಳ ಚಿತ್ರದಲ್ಲಿ ನಟಿಸಿದ್ದು ಸೆನ್ಸಾರ್ ಆಗಿ ಅವಾರ್ಡ್ ಗಳತ್ತ ಹೆಜ್ಜೆ ಹಾಕುತ್ತಿದೆ.

ಆರ್ ಕೆ ಮಂಗಳೂರು ಈ ಕಿರು ಚಿತ್ರವನ್ನು ನಿರ್ದೇಶನ ಮಾಡುವುದಲ್ಲದೆ ತನ್ನ ಕ್ಯಾಮೆರಾ ಕೈಚಳಕವನ್ನು ತೋರಿಸಿದ್ದಾರೆ ಹಾಗೂ ಸಂಕಲನವನ್ನು ಕೂಡ ಇವರೇ ನಿರ್ವಹಿಸಿದ್ದು ಮೂರು ಕ್ಷೇತ್ರದಲ್ಲೂ ಒಬ್ಬರೇ ಕೆಲಸ ಮಾಡಿ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಕನ್ನಡ ಮತ್ತು ತುಳು ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಆರ್ ಕೆ ಮಂಗಳೂರು ಇದೀಗ ನಿರ್ದೇಶನವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.

ಹೊಸ ವಿಚಾರವನ್ನು ಇಟ್ಟುಕೊಂಡು ತನ್ನದೇ ಆದ ಶೈಲಿಯಲ್ಲಿ ಅಭಿನಯಿಸಿದ ಈ ಬಾಲನಟನ ಅಭಿನಯಕ್ಕೆ ನಿಮ್ಮ ಬೆಂಬಲ ಇರಲಿ ಸದಾ ಹಸನ್ಮುಖಿಯಾಗಿ ಕಲೆಯನ್ನು ಹಸಿವಿನಿಂದ ತನ್ನ ಎರಡು ಕೈಗಳಿಂದ ಅಪ್ಪಿಕೊಳ್ಳುವ ಚಿಕ್ಕವಯಸ್ಸಿನ ಪೋರನಿಗೆ ಕರುನಾಡಿನ ಜನತೆಯ ಆಶೀರ್ವಾದ ಸದಾ ಇರಲಿ‌ ಅನ್ನುವುದೇ ನಮ್ಮ ಆಶಯ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *