LATEST NEWS
ಎಸ್ಐಟಿ ಕಚೇರಿಗೆ ಆಗಮಿಸಿದ ಧರ್ಮಸ್ಥಳ ಪ್ರಕರಣದ ದೂರುದಾರ

ಮಂಗಳೂರು ಜುಲೈ 26 : : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂಳಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ರಚನೆಯಾಗಿರುವ ಎಸ್ಐಟಿ ತಂಡದ ಮುಂದೆ ಹೇಳಿಕೆ ನೀಡಲು ದೂರುದಾರ ಇಂದು ಆಗಮಿಸಿದ್ದಾನೆ.
ಕದ್ರಿಯಲ್ಲಿರುವ ಐಬಿ ಕಚೇರಿಯಲ್ಲಿ ಎಸ್ಐಟಿ ತನಿಖಾ ಕಚೇರಿಯನ್ನಾಗಿ ಬಳಸಲಾಗುತ್ತಿದ್ದು. ಈಗಾಗಲೇ ನಡೆಯುತ್ತಿರುವ ಸಭೆ ಡಿಐಜಿ ಎಂ.ಎನ್.ಅನುಚೇತ್, ತನಿಖಾಧಿಕಾರಿ ಜಿತೇಂದ್ರ ದಯಾಮ್ ಹಾಗೂ ದ.ಕ, ಉಡುಪಿ, ಉ.ಕ ಜಿಲ್ಲೆಗಳಿಂದ ನೇಮಿಸಲ್ಪಟ್ಟ ತನಿಖಾ ತಂಡದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಧರ್ಮಸ್ಥಳ, ಎಸ್ಐ, ಮೂಲ್ಕಿ, ಬೈಂದೂರು ಇನ್ ಸ್ಪೆಕ್ಟರ್ಗಳು ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಮಲ್ಲಿಕಟ್ಟೆ ಎಸ್ ಐ ಟಿ ಕಚೇರಿಗೆ ಪ್ರಕರಣ ದೂರಾದರ ಆಗಮಿಸಿದ್ದು, ತನ್ನ ಹೇಳಿಕೆ ದಾಖಲಿಸಲಿದ್ದಾನೆ ಎಂದು ತಿಳಿದು ಬಂದಿದೆ. ಡಿಸೈರ್ ಗಾಡಿಯಲ್ಲಿ ಇಬ್ಬರು ವಕೀಲರ ಜೊತೆ ಆಗಮಿಸಿದ್ದು, ಈ ಬಾರಿಯೂ ಮುಸುಕುಧಾರಿಯಾಗಿ ಆಗಮಿಸಿದ್ದಾನೆ. ಇತ ನೀಡುವ ಹೇಳಿಕೆ ಇದೀಗ ಭಾರೀ ಮಹತ್ವ ಪಡೆದುಕೊಂಡಿದೆ.