KARNATAKA
ಮುಸ್ಲಿಂ ಸಮುದಾಯದ ನಿರ್ಭಂದ ಐಟಿಬಿಟಿ ವಲಯಕ್ಕೆ ಹೊಕ್ಕರೆ ಭಾರತದ ಜಾಗತಿಕ ನಾಯಕತ್ವವೇ ನಾಶವಾಗಲಿದೆ – ಕಿರಣ್ ಮಜುಂದರ್ ಷಾ
ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮುಸ್ಲಿಂ ವರ್ತಕರ ವ್ಯಾಪಾರ ವಹಿವಾಟನ್ನು ನಿರ್ಬಂಧಿಸುವ ಅಭಿಯಾನದ ವಿರುದ್ದ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಧ್ವನಿ ಎತ್ತಿದ್ದು, ಐಟಿ ಬಿಟಿ ವಲಯಕ್ಕೆ ಧರ್ಮಯುದ್ದ ಹೊಕ್ಕರೆ ಭಾರತದ ಜಾಗತಿಕ ನಾಯಕತ್ವವೇ ನಾಶವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಈ ಕುರಿತಂತೆ ಟ್ವಿಟ್ ಮಾಡಿರುವ ಅವರು ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ, ರಾಜ್ಯದಲ್ಲಿ ಬೆಳೆಯುತ್ತಿರುವ ಧಾರ್ಮಿಕ ವಿಭಜನೆಯನ್ನು ತಕ್ಷಣ ಸರಿಪಡಿಸಿ, ಒಂದು ವೇಳೆ ತಾಂತ್ರಿಕ ವಲಯವೇನಾದರೂ ಕೋಮುವಾದಕ್ಕೆ ಸಿಲುಕಿದರೆ ಭಾರತದ ಜಾಗತಿಕ ನಾಯಕತ್ವವೇ ನಾಶವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಕೆಲವು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ನಿಷೇಧ ಅಭಿಯಾನ ಇದೀಗ ಹಲಾಲ್ ವಿಚಾರ ಸೇರಿಕೊಂಡು ರಾಷ್ಟ್ರೀಯ ಮಟ್ಟಕ್ಕೆ ಹಬ್ಬಿದೆ. ಈ ವಿವಾದಗಳಲ್ಲಿ ರಾಜ್ಯ ಸರಕಾರದ ನಿಷ್ಕ್ರೀಯತೆ ವಿರುದ್ದ ಇದೀಗ ಆಕ್ರೋಶಗಳು ಕೇಳಿ ಬರುತ್ತಿದ್ದು, ಕಿರಣ್ ಷಾ ಅವರು ಸಾರ್ವಜನಿಕವಾಗಿ ಕಳವಳ ವ್ಯಕ್ತಪಡಿಸಿದ್ದು , ಈ ವಿಚಾರದ ಬಗ್ಗೆ ಧ್ವನಿ ಎತ್ತಿದ ಮೊದಲ ದೊಡ್ಡ ಕಾರ್ಪೊರೇಟ್ ನಾಯಕರಾಗಿದ್ದಾರೆ.