LATEST NEWS
ಕಾರಿನಲ್ಲಿ ದಾರಿಯುದ್ದಕ್ಕೂ ಫೋನ್ ನಲ್ಲಿ SORRY ಎನ್ನುತ್ತಿದ್ದ ಕಾಫಿ ಕಿಂಗ್ ಸಿದ್ದಾರ್ಥ
ಕಾರಿನಲ್ಲಿ ದಾರಿಯುದ್ದಕ್ಕೂ ಫೋನ್ ನಲ್ಲಿ SORRY ಎನ್ನುತ್ತಿದ್ದ ಕಾಫಿ ಕಿಂಗ್ ಸಿದ್ದಾರ್ಥ
ಮಂಗಳೂರು ಜುಲೈ 30: ಕೆಫೆ ಕಾಫಿ ಡೇ ಮಾಲೀಕ, ಮಾಜಿ ಸಿಎಂ. ಎಸ್ ಎಂ ಕೃಷ್ಣ ಅವರ ಅಳಿಯ ಉದ್ಯಮಿ ಸಿದ್ಧಾರ್ಥ್ ನಾಪತ್ತೆಯಾಗುವ ಮೊದಲು ಕಾರಿನಲ್ಲಿ ತನ್ನ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಹೇಳುತ್ತದ್ದರು ಎಂದು ಅವರ ಕಾರಿನ ಡ್ರೈವರ್ ಮಾಹಿತಿ ನೀಡಿದ್ದಾರೆ.
ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದ ಸಿದ್ದಾರ್ಥ್ ರಸ್ತೆ ಮಾರ್ಗವಾಗಿಯೇ ಮಂಗಳೂರು ತಲುಪಿದ್ದರು. ಏಕಾಏಕಿ ಸಿದ್ದಾರ್ಥ್ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಕಂಕನಾಡಿ ಪೊಲೀಸರು ಸಿದ್ದಾರ್ಥ ಅವರ ಕಾರಿನ ಡ್ರೈವರ್ ಬಸವರಾಜ್ ನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಈ ವೇಳೆ, ಸಾಹೇಬ್ರು ದಾರಿಯುದ್ಧಕ್ಕೂ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಕೇಳಿಕೊಳ್ಳುತ್ತಿದ್ದರು. ಮಂಗಳೂರು ಸರ್ಕಲ್‍ಗೆ ಹೋಗುವವರೆಗೂ ಸ್ನೇಹಿತರ ಬಳಿ ಕ್ಷಮೆ ಕೇಳಿದ್ದಾರೆ ಎಂದು ವಿವರಿಸಿದ್ದಾರೆ.
ಪೊಲೀಸರಿಗೆ ಕಾರಿನ ಡ್ರೈವರ್ ಬಸವರಾಜ್ ನೀಡಿರುವ ದೂರಿನಲ್ಲಿ ಇರುವ ಮಾಹಿತಿಯಂತೆ ಸಿದ್ದಾರ್ಥ್ ಅವರ ಸೂಚನೆಯಂತೆ ಡ್ರೈವರ್ ಸೋಮವಾರ ಮಧ್ಯಾಹ್ನ 12.30ರಲ್ಲಿ ಸಕಲೇಶಪುರಕ್ಕೆ ಕಾರಿನಲ್ಲಿ ಹೊರಟ್ಟಿದ್ದಾರೆ.
ಸಕಲೇಶಪುರ ಸಮೀಪಿಸುತ್ತಿದ್ದಂತೆ ಸಿದ್ದಾರ್ಥ ಡ್ರೈವರ್ ಬಸವರಾಜ್ ಗೆ ಮಂಗಳೂರಿಗೆ ತೆರಳಲು ಸೂಚಿಸಿದ್ದಾರೆ.ನಂತರ ಮಂಗಳೂರು ಸರ್ಕಲ್ ಬಿಟ್ಟು ಮುಂದೆ ಹೋದ ನಂತರ ದೊಡ್ಡ ಸೇತುವೆ ಸಿಕ್ಕಿತು. ಅದರ ಬಳಿಗೆ ಬಂದಾಗ ಕಾರಿನಿಂದ ಇಳಿದ ಅವರು, ಸೇತುವೆಯ ಕೊನೆಗೆ ಹೋಗಿ ನಿಲ್ಲುವಂತೆಯೂ, ತಾವು ನಡೆದುಕೊಂಡು ಬರುವುದಾಗಿ ತಿಳಿಸಿದರು. ನಂತರ ನಡೆದುಕೊಂಡು ಬಂದ ಅವರು, ಕಾರಿನ ಒಳಗೇ ಇರುವಂತೆ ನನಗೆ ತಿಳಿಸಿ, ಮರಳಿ ಹಿಂದಕ್ಕೆ ಹೋದರು. ಸಿದ್ದಾರ್ಥ್ ಅವರು ತಮ್ಮ ಪರ್ಸ್ ಹಾಗೂ ಇನ್ನಿತರ ವಸ್ತುಗಳನ್ನು ಕಾರಿನಲ್ಲೇ ಬಿಟ್ಟು ಮೊಬೈಲ್ ನಲ್ಲಿ ಮಾತನಾಡಿಕೊಂಡು ಸೇತುವೆಯ ಮೇಲೆ ಏಕಾಂಗಿಯಾಗಿ ಹೋಗಿದ್ದಾರೆ.
ನಂತರ ರಾತ್ರಿ 8 ಗಂಟೆ ಆದರೂ ಅವರು ಕಾಣಲಿಲ್ಲ. ಅವರ ಮೊಬೈಲ್‌ಗೆ ಕರೆ ಮಾಡಿದೆ. ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ, ಪುತ್ರ ಅಮಾರ್ತ್ಯ ಹೆಗ್ಡೆ ಅವರಿಗೆ ತಿಳಿಸಿದೆ. ನಂತರ ಅಮಾರ್ತ್ಯ ಸಲಹೆ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಚಾಲಕ ಪೊಲೀಸ್‌ರಿಗೆ ತಿಳಿಸಿದ್ದಾನೆ.