DAKSHINA KANNADA
ಆತಂಕ ಸೃಷ್ಠಿಸಿದ ಕರಾವಳಿ ISIS ಲಿಂಕ್
ಆತಂಕ ಸೃಷ್ಠಿಸಿದ ಕರಾವಳಿ ISIS ಲಿಂಕ್
ಮಂಗಳೂರು ಅಕ್ಟೋಬರ್ 4: ಕೊಲ್ಲಿ ರಾಷ್ಟ್ರಗಳಲ್ಲಿನ ತೀವ್ರವಾದಿ ಇಸ್ಲಾಮಿಕ್ ಸಿದ್ಧಾಂತ ರಾಜ್ಯದ ಕರಾವಳಿಗೂ ಕಾಲಿಟ್ಟಿದೆ. ಈ ಕುರಿತು ಸಲಾಫಿ ಮುಖಂಡನೋರ್ವ ಧ್ವನಿ ಆಧಾರಿತ ಸಂದೇಶಕ್ಕೆ ಐಸಿಸ್ ಲಿಂಕ್ ಕಲ್ಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ಸೃಷ್ಟಿಸಲಾಗಿದೆ.
ಸಲಾಫಿ ಮುಖಂಡ ಇಸ್ಮಾಯಿಲ್ ಶಾಫಿ ಸಂದೇಶ
ಸಲಾಫಿ ಮುಖಂಡರಾದ ಇಸ್ಮಾಯಿಲ್ ಶಾಫಿ ಅವರ ಧ್ವನಿ ಆಧಾರಿತ ಸಂದೇಶದ ಎಡವಟ್ಟಿನಿಂದಾಗಿ ಈ ಎಲ್ಲ ಅವಾಂತರ ಸೃಷ್ಟಿಯಾಗಿದೆ. ಕಡಲ ನಗರಿ ಮಂಗಳೂರಿನಲ್ಲಿಯೂ ಕಟ್ಟರ್ ಇಸ್ಲಾಮಿಕ್ ಸಿದ್ಧಾಂತ ಕಾಲಿಟ್ಟಿದೆ. ಈ ಕುರಿತು ಸೌತ್ ಕೆನರಾ ಸಲಾಫಿ ಸಂಘಟನೆಯ ಮುಖಂಡ ಇಸ್ಮಾಯಿಲ್ ಶಾಫಿ ಅವರ ಧ್ವನಿ ಆಧಾರಿತ ಸಂದೇಶ ಇದಕ್ಕೆ ಪುಷ್ಟಿ ನೀಡಿದೆ.
ಇಸ್ಮಾಯಿಲ್ ಶಾಫಿ ಅವರ ಧ್ವನಿ ಆಧಾರಿತ ಸಂದೇಶದ ಪ್ರಕಾರ
ಸಲಫಿ ದಮ್ಮಾಜ್ ಎಂಬ ತೀವ್ರವಾದಿ ಸಿದ್ಧಾಂತದಿಂದ ಫ್ರಭಾವಿತರಾಗಿ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸುತ್ತ ಮುತ್ತ ಕಾರ್ಯಚರಣೆ ನಡೆಸುತ್ತಿರುವ ಯುವಕರ ಗುಂಪೂಂದು ವಿದ್ಯಾರ್ಥಿಗಳನ್ನು ಬ್ರೈನ್ ವಾಶ್ ಮಾಡುತ್ತಿದೆ. ಐಸಿಸ್ ಮಾದರಿಯಲ್ಲೇ ವಸ್ತ್ರ ಧರಿಸುವ ಇವರು ಕಪ್ಪು ಅಥವಾ ಕಂದು ಬಣ್ಣದ ಪೈಜಾಮ್ ಧರಿಸುತ್ತಾರೆ. ತಲೆಗೆ ಮುಂಡಾಸು ಅಥವಾ ಟೋಪ್ಪಿ ತೊಡುತ್ತಾರೆ. ಜಿಲ್ಲೆಯ ಬಿ.ಸಿ.ರೋಡ್, ಕಲ್ಲಡ್ಕ, ಮಾರಿಪಳ್ಳ, ಉಳ್ಳಾಲದಲ್ಲಿ ಈ ಯುವಕರ ಗುಂಪು ಇದೆ. ಎಂದು ಆಡಿಯೋ ಸಂದೇಶದಲ್ಲಿ ಇಸ್ಮಾಯಿಲ್ ಹೇಳಿದ್ದಾರೆ.
ಈ ಕಟ್ಟರ್ ಯುವಕರ ಗುಂಪು, ಮಹಿಳೆಯರು ಇಡೀ ದೇಹವನ್ನು ಸಂಪೂರ್ಣ ಮುಚ್ಚುವಂತೆ ವಸ್ತ್ರ ಧರಿಸಲು ತಾಕಿತ್ತು ಮಾಡುತ್ತಿದ್ದಾರೆ. ಮಹಿಳೆಯರು ಮನೆಯಲ್ಲಿ ಗಂಡನ ಹೊರತು ಯಾರ ಜೊತೆಗೂ ಮಾತನಾಡದಂತೆ ಗೃಹಬಂಧನ ವಿಧಿಸುತ್ತಾರೆ. ಇವರ ಪ್ರಕಾರ ಮುಸ್ಲಿಂ ಪುರುಷರು ಇತರ ಧರ್ಮದವರ ಜೊತೆ ಮಾತನಾಡುವುದು ತಪ್ಪು. ಹಿಂದೂಗಳ ಜೊತೆ ನಗುವುದು “ಹರಾಮ್” ಎಂದು ಹೇಳಿ ಈ ಗುಂಪಿನ ಸದಸ್ಯರು ಕೇರಳದಲ್ಲಿ ಬಂಧನಕ್ಕೂ ಒಳಾಗಾಗಿದ್ದರು. ಈ ಗುಂಪೂಂದರ ಮಸೀಧಿ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡಿನಲ್ಲಿದೆ. ಅಲ್ಲಿ ಇವರು ಗುಪ್ತವಾಗಿ ಕಾರ್ಯಚರಣೆ ಮಾಡುತ್ತಿದ್ದಾರೆ ಎಂದು ತಮ್ಮ ಸಂದೇಶ ದಲ್ಲಿ ಇಸ್ಮಾಯಿಲ್ ಶಾಫಿ ತಿಳಿಸಿದ್ದಾರೆ.
ಧ್ವನಿ ಸಂದೇಶಕ್ಕೆ ಟೆರರ್ ಲಿಂಕ್
ಮುಸ್ಲಿಂ ಯವಕರಲ್ಲಿ ಜಾಗೃತಿ ಮೂಡಿಸಲು ಸಲಫಿ ಮುಖಂಡ ಇಸ್ಮಾಯಿಲ್ ಶಾಫಿ ಸಂದೇಶ ಕ್ಕೆ ಇದೀಗ ಟೆರರ್ ಲಿಂಕ್ ಕಲ್ಪಿಸಲಾಗಿದೆ. ಒಂದು ವಾರದ ಹಿಂದೆ ಸಂದೇಶ ಕಳುಹಿಸಿ ಮುಸ್ಲಿಂ ತೀವ್ರವಾದ ಬಗ್ಗೆ ಜಾಗೃತೆ ವಹಿಸುವಂತೆ ಕರೆನೀಡಿದ್ದರು. ಆದರೆ ಇಸ್ಮಾಯಿಲ್ ಶಾಫಿ ಧ್ವನಿ ಆಧಾರಿತ ಸಂದೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕರಾವಳಿಗೆ ಐಸಿಸ್ ಲಿಂಕ್ ಇರೋದಾಗಿ ಕೆಲವು ಮಾಧ್ಯಮಗಳು ಸುದ್ದಿ ಭಿತ್ತರಿಸಿರುವುದು ಜಿಲ್ಲೆಯ ಜನತೆಯಲ್ಲಿ ಆತಂಕಕ್ಕೂ ಕಾರಣವಾಗಿದೆ. ಈ ಧ್ವನಿ ಸಂದೇಶ ದಿಂದ ಭಾರೀ ಅವಾಂತರ ಸೃಷ್ಠಿಯಾಗುತ್ತಿದ್ದಂತೆಯೇ ಇಸ್ಮಾಯಿಲ್ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರು ಮಿರರ್ ನೊಂದಿಗೆ ಮಾತನಾಡಿದ ಇಸ್ಮಾಯಿಲ್ ಶಾಫಿ “ನಾನು ಜಾಗೃತಿಗಾಗಿ ಆಡಿಯೋ ಸಂದೇಶ ಕಳುಹಿಸಿದ್ದೆ. ಆದರೆ ಐಸಿಸ್ ಬಗ್ಗೆ ಯಾವುದನ್ನೂ ಅದರಲ್ಲಿ ಹೇಳಿಲ್ಲ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳನ್ನು ಸೃಷ್ಠಿಸಿ ದೊಡ್ಡ ವಿವಾದವಾಗುವಂತೆ ಮಾಡಿದ್ದಾರೆ “. ಎಂದು ಸ್ಪಷ್ಟನೆ ನೀಡಿದ್ದಾರೆ. ವಿವಾದವೆದ್ದ ಬಳಿಕ ಶಾಫಿಯವರು ಸ್ಪಷ್ಟನೆ ನೀಡಿದ್ದರೂ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ಶಾಫಿ ಯವರು ಹೇಳಿದ ಮಾತಿಗೆ ಪೂರಕವಾಗಿರುವಂತಿರುವುದೂ ಸತ್ಯವಾಗಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕಿದೆ.