ಸಿ.ಎಂ.ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ರೆಸಾರ್ಟ್ ವಾಸ್ತವ್ಯ ಹಿನ್ನಲೆ, ಮಾಧ್ಯಮದವರನ್ನು ಬೀದಿ ಬಿಕ್ಷುಕರಂತೆ ನಡೆಸಿಕೊಂಡ ಪೋಲೀಸರು.

ಉಡುಪಿ, ಎಪ್ರಿಲ್ 29: ಸಿ.ಎಂ ಕುಮಾರಸ್ವಾಮಿ ಹಾಗೂ‌ ಮಾಜಿ‌ ಪ್ರಧಾನಿ ಎಚ್ ಡಿ‌ ದೇವೇಗೌಡ ಉಡುಪಿಯ ಹಲ್ತ್ ರಿಸಾರ್ಟ್ ಗೆ ಆಗಮಿಸಿದ್ದಾರೆ.

ಕಾಪುವಿನ ಮೂಳೂರಿನಲ್ಲಿರುವ ಸಾಯಿ ರಾಧಾ ರಿಸಾರ್ಟ್ ನಲ್ಲೇ ನಾಲ್ಕೈದು ದಿನ ತಂಗುವ ಸಾಧ್ಯತೆ ಇದೆ.

ಬೆಂಗಳೂರು ನಿಂದ ವಿಶೇಷ ವಿಮಾನ ದಲ್ಲಿ ಆಗಮಿಸಿದ ತಂದೆ ಮಗ ರಾತ್ರಿ ರಿಸಾರ್ಟ್ ನಲ್ಲಿ ವಾಸ್ತವ್ಯ ಮಾಡಿದ್ದಾರೆ.

ಕಳೆದ ಭಾನುವಾರ ಸಿಎಂ ಕುಮಾರಸ್ವಾಮಿ ಚುನಾವಣಾ ಪ್ರಚಾರ ಮುಗಿಸಿಕೊಂಡು ಎರಡು ದಿನ‌ ಇದೇ ರಿಸಾರ್ಟ್ ನಲ್ಲಿ ತಂಗಿದ್ದರು.

ಪ್ರಾಥಮಿಕ ಚಿಕಿತ್ಸೆ ಪೂರೈಸಿ ವಾರದ ನಂತರ ಬರುವುದಾಗಿ ತಿಳಿಸಿದ್ದರು. ಅಂತೆಯೇ ತಂದೆ ದೇವೇಗೌಡ ಜೊತೆಗೆ ಪುನರಾಗಮಿಸಿದ್ದಾರೆ.

ಈಹೆಲ್ತ್ ರಿಸಾರ್ಟ್ ನಲ್ಲಿ ಪಂಚ ಕರ್ಮ ಚಿಕಿತ್ಸೆ ಸೇರಿದಂತೆ ವಿವಿಧ ಆಯುರ್ವೇದ ಚಿಕಿತ್ಸೆ ಗೆ ಇವರು ಒಳಪಡಲಿದ್ದಾರೆ.

ಈ ಭೇಟಿಯನ್ನು ಸಂಪೂರ್ಣ ಖಾಸಗಿಯಾಗಿಯೇ ಕಳೆಯಲು ಸಿಎಂ ಬಯಸಿದ್ದಾರೆ.

ಹಾಗಾಗಿ ರಿಸಾರ್ಟ್ ನ ಅಸುಪಾಸಿಗೂ ಯಾರೂ ಬರದಂತೆ ಪೊಲೀಸರಿಗೆ ಸೂಚಿಸಲಾಗಿದೆ.

ಭಾನುವಾರ ರಾತ್ರಿ ಚಿತ್ರೀಕರಣ ಕ್ಕೆ ತೆರಳಿದ್ದ ಮಾಧ್ಯಮ ದವರಿಗೆ ಪೊಲೀಸರು ಅಡ್ಡಿ ಪಡಿಸಿದರು.

ಸಾರ್ವಜನಿಕ ರಸ್ತೆಯಲ್ಲೂ ನಿಲ್ಲಲು ಅವಕಾಶ ನಿರಾಕರಿಸಿದರು. ಈವೇಳೆ ಮಾತಿನ ಚಕಮಕಿಯೂ ನಡೆಯಿತು.

ತನ್ನ ಅನುಕೂಲಕ್ಕಾಗಿ ಮಾಧ್ಯಮದವರನ್ನು ಅಣ್ಣಾ, ತಮ್ಮಾ, ಬ್ರದರ್ ಎಂದು ಕರೆಯುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಜೊತೆ ಕೋಪಿಸಿಕೊಂಡಿರುವ ಹಿನ್ನಲೆಯಲ್ಲಿ ಸ್ವತ ಸಿ.ಎಂ ಪೋಲೀಸರಿಗೆ ಈ ರೀತಿಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಹಾಲಿ ಸಿ.ಎಂ ಹಾಗೂ ಮಾಜಿ ಪಿ.ಎಂ ಗಳ ವೈಯುಕ್ತಿಕ ಕಾರಣಕ್ಕಾಗಿ ಇದೀಗ ಹೆಲ್ತ್ ರೆಸಾರ್ಟ್ ಇರುವ ಸಾರ್ವಜನಿಕ ರಸ್ತೆಯಲ್ಲಿ ಮಾಧ್ಯಮ ಪ್ರತಿನಿಧಿಗಳು, ಸಾರ್ವಜನಿಕರು ನಡೆದಾಡಿಕೊಂಡು ಹೋಗುವುದಕ್ಕೂ ತಡೆ ಹೇರಲಾಗಿರುವುದು ಗೂಂಡಾ ರಾಜ್ಯದ ಚಿತ್ರಣವನ್ನು ಕಣ್ಣ ಮುಂದೆ ತರುವಂತಿದೆ.

ಸಾಮಾಜಿಕ ಸ್ಥರದಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಇಂಥ ವ್ಯಕ್ತಿಗಳು ಆದಷ್ಟು ಸಾರ್ವಜನಿಕರಿಂದ ದೂರವೇ ಉಳಿದು, ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗದಂತೆ ತಮ್ಮ ವೈಯುಕ್ತಿಕ ಜೀವನ ನಡೆಸುವ ಅಗತ್ಯವಿದೆ.

ಅದು ಬಿಟ್ಟು ತಮ್ಮ ವೈಯುಕ್ತಿಕ ಕಾರಣಕ್ಕಾಗಿ ಸಾರ್ವಜನಿಕರಿಗೆ ತೊಂದರೆ ಮಾಡುವ ಇಂಥಹ ವ್ಯಕ್ತಿಗಳ ಬಗ್ಗೆ ಜನ ಧ್ವನಿ ಎತ್ತಬೇಕಿದೆ.