LATEST NEWS
ಮಂಗಳೂರು-ಮಿಸ್ಟರ್ ಕಾಮತ್ ನಾಲ್ಕು ವರ್ಷ ಅಧಿಕಾರಿದಲ್ಲಿದ್ರಿ ಆವಾಗ್ಲೂ ಸ್ಮಾರ್ಟ್ ಸಿಟಿ ಇತ್ತೂ ಯಾಕೆ ಖರ್ಚು ಮಾಡಿಲ್ಲ – ಸಿಎಂ

ಮಂಗಳೂರು ಮೇ 17: ಮಂಗಳೂರಿನ ಪಡೀಲಿನಲ್ಲಿ ನಿರ್ಮಿಸಲಾಗಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆ ಸಮಾರಂಭದ ವೇಳೆ ಜಿಲ್ಲಾಧಿಕಾರಿ ಕಚೇರಿಯ ಕ್ರೆಡಿಟ್ ವಾರ್ ನಡೆದಿದೆ. ಶಾಸಕ ಕಾಮತ್ ಮಾತಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನಿಡಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ತಮ್ಮ ಭಾಷಣದ ವೇಳೆ ಜಿಲ್ಲಾಧಿಕಾರಿ ಕಚೇರಿಯನ್ನು ಸ್ಮಾರ್ಟ್ ಸಿಟಿ ದುಡ್ಡಿನಲ್ಲಿ ಪೂರ್ತಿ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ. ಮೋದಿ ಇಂಥ ಯೋಜನೆ ಮಾಡದೇ ಇರುತ್ತಿದ್ದರೆ ಜಿಲ್ಲಾಧಿಕಾರಿ ಕಚೇರಿ ಆಗುತ್ತಿರಲಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಕೇಂದ್ರ- ರಾಜ್ಯ ಸರ್ಕಾರದ ಪಾಲಿದ್ದರೂ ಇಂಥ ಯೋಜನೆ ಮಾಡಿದ್ದು ಮೋದಿ. ಇದರ 25 ಕೋಟಿ ನೆರವಿನಲ್ಲಿ ಕಾಮಗಾರಿ ಪೂರ್ತಿಗೊಳಿಸಲಾಗಿದೆ. ಹಾಗಾಗಿ, ಕೇಂದ್ರಕ್ಕೂ ಇದರ ಕ್ರೆಡಿಟ್ ಸಲ್ಲುತ್ತದೆ. ಕೇವಲ ರಾಜ್ಯ ಸರ್ಕಾರದ ಹಣದಿಂದಷ್ಟೇ ಆಗಿದ್ದಲ್ಲ ಎಂದರು.

ಆನಂತರ, ಭಾಷಣಕ್ಕೆ ನಿಂತ ಸಿಎಂ ಸಿದ್ದರಾಮಯ್ಯ ಶಾಸಕ ವೇದವ್ಯಾಸ ಕಾಮತ್ ಉದ್ದೇಶಿಸಿಯೇ ಮಾತು ಆರಂಭಿಸಿದರು. ಎಯ್ ಕಾಮತ್, ಸ್ಮಾರ್ಟ್ ಸಿಟಿ ದುಡ್ಡು ಅಂದ್ರೆ ಏನ್ರಿ. ಅದರಲ್ಲಿ ಅರ್ಧ ಪಾಲು ರಾಜ್ಯದ್ದೂ ಇದೆ. ಸ್ಮಾರ್ಟ್ ಸಿಟಿಯಿಂದ ಮಾಡಿದ್ದು ಅನ್ನೋದಾದ್ರೆ ಅದಕ್ಕೂ ಹಿಂದೆ ನಾಲ್ಕು ವರ್ಷ ನಿಮ್ಮೆ ಸರ್ಕಾರ ಇತ್ತಲ್ವಾ. ಯಾಕೆ ನೀವು ಮಾಡಿಲ್ಲ ಎಂದು ಗುದ್ದು ನೀಡಿದರು. ರಾಜಕೀಯ ಮಾಡೋಣ, ಹಾಗಂತ ವಿಷಯ ಇರೋದನ್ನು ತಿರುಚಲು ಹೋಗಬಾರದು. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡೋದು ಬೇಡ ಎಂದು ಸಲಹೆ ನೀಡಿದರು.