LATEST NEWS
ಉಡುಪಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕ್ರೈಸ್ತ ಧರ್ಮಗುರುಗಳಿಗೆ ಅವಮಾನ

ಉಡುಪಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕ್ರೈಸ್ತ ಧರ್ಮಗುರುಗಳಿಗೆ ಅವಮಾನ
ಉಡುಪಿ ಜನವರಿ 11: ಉಡುಪಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೈಸ್ತ ಧರ್ಮಗುರುಗಳಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ನಿಟ್ಚಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಒಂದು ವೈರಲ್ ಆಗಿದ್ದು ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಸಾಧನಾ ಸಮಾವೇಶದ ಹಿನ್ನಲೆಯಲ್ಲಿ ಉಡುಪಿಯಲ್ಲಿ ತಂಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಉಡುಪಿ ಬಿಷಪ್ ಸಹಿತ ಕ್ರೈಸ್ತ ಧರ್ಮಗುರುಗಳು ಬಂದಿದ್ದರು. ಈ ಸಂದರ್ಭದಲ್ಲಿ ಧರ್ಮಗುರುಗಳು ಬಂದಾಗ ಎದ್ದು ನಿಂತು ಸ್ವಾಗತಿಸುವ ಕನಿಷ್ಟ ಸೌಜನ್ಯವನ್ನೂ ತೋರಿಸದೆ ತಾವು ಕುಳಿತಲ್ಲಿಗೆ ಕ್ರೈಸ್ತ ಧರ್ಮಗುರುಗಳನ್ನು ಕರೆಸಿ , ಕುಳಿತುಕೊಂಡೇ ಧರ್ಮಗುರುಗಳ ಜೊತೆ ಮಾತನಾಡುವ ಮೂಲಕ ದುರಹಂಕಾರ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಪೋಟೋ ಒಂದು ವೈರಲ್ ಆಗಿದ್ದು , ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕ್ರೈಸ್ತ ಸಮುದಾಯದಲ್ಲಿ ಅಸಮಧಾನಕ್ಕೆ ಕಾರಣವಾಗಿದೆ. ಉಡುಪಿ ಧರ್ಮ ಪ್ರಾಂತ್ಯದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ, ಛಾನ್ಸೆಲರ್ ವಲೇರಿಯನ್, ಛಾನ್ಸೆಲರ್ ಡೆನ್ನಿಸ್ ಡೇಸಾ ಸಹಿತ ಇನ್ನಿತರ ಕ್ರೈಸ್ತ ಧರ್ಮಗುರುಗಳು ಸಿದ್ಧರಾಮಯ್ಯ ಅವರನ್ನು ಉಡುಪಿಯಲ್ಲಿ ಭೇಟಿಯಾಗಿದ್ದರು. ಕುಳಿತಲ್ಲಿಂದಲೇ ಬಿಷಪ್ ಜೊತೆಗೆ ಮಾತುಕತೆ ನಡೆಸಿದರು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಮುಖ್ಯಮಂತ್ರಿಗಳ ಈ ನಡವಳಿಕೆಯಿಂದಾಗಿ ಕ್ರೈಸ್ತ ಸಮಾಜದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ತಮಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಎದ್ದು ನಿಲ್ಲದೇ ಇದ್ದರೂ, ಕ್ರೈಸ್ತ ಧರ್ಮಗುರುಗಳು ಬಂದಾಗ ಎದ್ದು ನಿಂತು ಗೌರವ ಸೂಚಿಸಬೇಕೆಂಬ ಕಳಕಳಿ ಮುಖ್ಯಮಂತ್ರಿಯವರಲ್ಲಿ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.