LATEST NEWS
ಮಹಾಕುಂಭ ಮೇಳದಲ್ಲಿ 15,000 ಕಾರ್ಮಿಕರಿಂದ ಸ್ವಚ್ಛತಾ ಅಭಿಯಾನ, ವಿಶ್ವ ದಾಖಲೆ

ಉತ್ತರ ಪ್ರದೇಶ: ಸುಮಾರು 15,000 ನೈರ್ಮಲ್ಯ ಕಾರ್ಮಿಕರು ಸೋಮವಾರ ಇಲ್ಲಿನ ನಾಲ್ಕು ವಲಯಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಲು ಪ್ರಯತ್ನಿಸಿದರು.
ಪ್ರಯಾಗ್ ರಾಜ್ ಮೇಯರ್ ಗಣೇಶ್ ಕೇಸರ್ವಾನಿ, ಮಹಾಕುಂಭದ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿ ಆಕಾಂಕ್ಷಾ ರಾಣಾ ಮತ್ತು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮೇಲ್ವಿಚಾರಣಾ ತಂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ ಮುಖ್ಯ ಮೇಲ್ವಿಚಾರಕ ಮತ್ತು ನ್ಯಾಯಾಧೀಶ ರಿಷಿ ನಾಥ್ ತಮ್ಮ ತಂಡದೊಂದಿಗೆ ಲಂಡನ್ನಿಂದ ಪ್ರಯಾಗ್ರಾಜ್ಗೆ ಆಗಮಿಸಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ನೈರ್ಮಲ್ಯ ಕಾರ್ಮಿಕರನ್ನು ಅವರ ರಿಸ್ಟ್ ಬ್ಯಾಂಡ್ ಗಳ ಮೇಲಿನ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಎಣಿಸಲಾಯಿತು.
ದಾಖಲೆಯ ಅಂತಿಮ ಮೌಲ್ಯಮಾಪನ ವರದಿಯನ್ನು ಮೂರು ದಿನಗಳ ನಂತರ ಬಿಡುಗಡೆ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಯಾಗ್ ರಾಜ್ ನಲ್ಲಿ ನಡೆದ 2019 ರ ಕುಂಭಮೇಳದಲ್ಲಿ, 10,000 ನೈರ್ಮಲ್ಯ ಕಾರ್ಮಿಕರು ಸಿಂಕ್ರೊನೈಸ್ಡ್ ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ರಚಿಸಿದರು.
ವಿಶ್ವ ದಾಖಲೆಯ ಪ್ರಯತ್ನವು ಪವಿತ್ರ ಭೂಮಿಯಾದ ಪ್ರಯಾಗ್ ರಾಜ್ ನಿಂದ ಜಗತ್ತಿಗೆ ಸ್ವಚ್ಛತೆಯ ಪ್ರಬಲ ಸಂದೇಶವನ್ನು ಕಳುಹಿಸಿದೆ ಎಂದು ಕೇಸರ್ವಾನಿ ಹೇಳಿದರು.