KARNATAKA
ತರಗತಿಯಲ್ಲೇ 3ನೇ ತರಗತಿ ವಿಧ್ಯಾರ್ಥಿನಿಗೆ ಹಾರ್ಟ್ ಅಟ್ಯಾಕ್
ಚಾಮರಾಜನಗರ ಜನವರಿ 06: ತರಗತಿಯಲ್ಲಿ ಶಿಕ್ಷಕಿಗೆ ನೋಟ್ಸ್ ತೋರಿಸುವ ವೇಳೆ ಏಕಾಏಕಿ ಕುಸಿದು ಬಿದ್ದು 3ನೇ ತರಗತಿ ವಿಧ್ಯಾರ್ಥಿನಿ ಸಾವನಪ್ಪಿದ ಘಟನೆ ಚಾಮರಾಜನಗರದ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದ ನಿವಾಸಿ ಲಿಂಗರಾಜು, ಶ್ರುತಿ ದಂಪತಿಯ ಏಕೈಕ ಪುತ್ರಿ ತೇಜಸ್ವಿನಿ ಎಂದು ಗುರುತಿಸಲಾಗಿದೆ. ಕ್ಲಾಸ್ನಲ್ಲಿ ಶಿಕ್ಷಕಿಗೆ ನೋಟ್ಸ್ ತೋರಿಸಲು ನಿಂತಾಗ ಏಕಾಏಕಿ ಕುಸಿದುಬಿದ್ದಿದ್ದಾಳೆ, ಕೂಡಲೇ ಶಿಕ್ಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲೇ ಆಕೆ ಸಾವನಪ್ಪಿದ್ದಾಳೆ. ಇನ್ನು ತೇಜಸ್ವಿನಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಇದ್ದ ಏಕೈಕ ಪುತ್ರಿಯನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ನೋಡುಗರ ದುಃಖ ಮಡುಗಟ್ಟಿದ್ದು, ಶಾಲೆಯಲ್ಲಿ ಶೋಕ ಆವರಿಸಿದೆ.