DAKSHINA KANNADA
ರಾಜ್ಯ ಕರಾವಳಿ ಗಡಿಯಲ್ಲಿ ಚೀನಾ ಮೀನುಗಾರಿಕಾ ಬೋಟ್ ಪತ್ತೆ..! ಹೈ ಅಲರ್ಟ್
ಕಾರವಾರ : ಕರ್ನಾಟಕ ರಾಜ್ಯದ ಕರಾವಳಿಯಲ್ಲಿ ಚೀನಾದ ಮೀನುಗಾರಿಕಾ ದೋಣಿಯೊಂದು ಪತ್ತೆಯಾಗಿದೆ. ಈ ಮೂಲಕ ಚೀನಾ ರಾಜ್ಯ ಕರಾವಳಿಯಲ್ಲೂ ಅತಿಕ್ರಮಣ ನಡೆಸಿ ಮೀನುಗಾರಿಕೆ ಮಾಡುತ್ತಿರುವ ಬಗ್ಗೆ ಗುಮಾನಿ ಎದ್ದಿದೆ.
ಚೀನಾದ ಡ್ರ್ಯಾಗನ್ ಧ್ವಜ ಹೊಂದಿರುವ ಈ ಬೃಹತ್ ದೋಣಿ ಮೀನುಗಾರಿಕೆ ನಡೆಸುತ್ತಿರುವ ವಿಡಿಯೋವನ್ನು ಕರಾವಳಿಯ ಮೀನುಗಾರರು ಸೆರೆಹಿಡಿದಿದ್ದಾರೆ ಎನ್ನಲಾಗಿದೆ. ಮೂರು ದಿನಗಳ ಹಿಂದೆಯೆ ಚೀನಾದಿಂದ ಬಂದಿದೆ ಎಂದು ಹೇಳಲಾದ BVKY5 ಹೆಸರಿನ ಬೃಹತ್ ಹಡಗು ಪತ್ತೆಯಾಗಿದ್ದು ಚೀನಾ ದೋಣಿ ರಾಜ್ಯದ ಕರಾವಳಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿರುವ ವಿಡಿಯೋ ಸೆರೆ ಹಿಡಿದಿದ್ದಾರೆ. ಈ ಕುರಿತು ಕರಾವಳಿ ಕೋಸ್ಟ್ ಗಾರ್ಡ್ ಗೆ ಮಾಹಿತಿ ರವಾನಿಸಲಾಗಿದ್ದು ತನಿಖೆ ಆರಮಭವಾಗಿದೆ. ಕರಾವಳಿ ಭದ್ರತಾ ಪೊಲೀಸರು ಮತ್ತು ನೌಕಾಪಡೆಯ ಗುಪ್ತಚರ ಜಂಟಿ ತನಿಖೆ ಆರಂಭಿಸಿದ್ದು , ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಹೊರಟಿದ್ದ ಸ್ಥಳೀಯ ಮೀನುಗಾರಿಕಾ ದೋಣಿಯವರು ಈ ವೀಡಿಯೊವನ್ನು ಸೆರೆಹಿಡಿದಿದ್ದಾರೆ ಎನ್ನಲಾಗಿದೆ. ಹೊನ್ನಾವರ ಕರಾವಳಿಯಿಂದ ಸುಮಾರು 200 ನಾಟಿಕಲ್ ಮೈಲು ದೂರದಲ್ಲಿರುವ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಈ ದೃಶ್ಯ ಕಂಡುಬಂದಿದೆ ಎನ್ನಲಾಗಿದೆ. ಮೀನುಗಾರಿಕೆಯ ನೆಪದಲ್ಲಿ ಚೀನಾದಿಂದ ಗೂಡಾಚಾರಿಕೆ ಕೂಡ ನಡೆಯುವ ಸಾಧ್ಯತೆಗಳಿದ್ದು ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಅನ್ನುತ್ತಾರೆ ಕರಾವಳಿಯ ಮೀನುಗಾರರು.