LATEST NEWS
ಮಲ್ಪೆ – ಮೀನು ಆಯುತ್ತಿದ್ದ 16 ಅಪ್ರಾಪ್ತ ಮಕ್ಕಳ ರಕ್ಷಣೆ
ಉಡುಪಿ ನವೆಂಬರ್ 03: ಮಲ್ಪೆ ಬಂದರಿನಲ್ಲಿ ಮೀನು ಆಯುವ ಕೆಲಸ ನಿರ್ವಹಿಸು 16 ಅಪ್ರಾಪ್ತ ಮಕ್ಕಳನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಬೆಳಗ್ಗಿನ ಜಾವ 4.30ಕ್ಕೆ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು ಮೀನು ಆಯುವ ಕೆಲಸ ಮಾಡುತ್ತಿದ್ದ ಕೊಪ್ಪಳ ಮತ್ತು ದಾವಣಗೆರೆ ಮೂಲದ 11 ಬಾಲಕಿಯರು, 5 ಬಾಲಕರು ಸೇರಿ 16 ಮೀನು ಆಯುವ ಮಕ್ಕಳನ್ನು ರಕ್ಷಿಸಿ ನಿಟ್ಟೂರು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಯಿತು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಫುರ್ಟಾಡೊ ಮತ್ತು ಸದಸ್ಯರು ಮಕ್ಕಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಲಿದ್ದಾರೆ.