LATEST NEWS
ಲೆಡಿಗೋಶನ್ ಮಗು ಅದಲು ಬದಲು ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವು
ಮಂಗಳೂರು ನವೆಂಬರ್ 15: ಜಿಲ್ಲೆಯಲ್ಲಿ ಸಂಚಲ ಮೂಡಿಸಿದ್ದ ಮಗು ಅದಲು ಬದಲು ಪ್ರಕರಣದಲ್ಲಿ ತಂದೆತಾಯಿಂದ ಪರಿತ್ಯಕ್ತವಾಗಿ ಲೇಡಿಗೋಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವನಪ್ಪಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಹಿಳೆಯೊಬ್ಬಳು ಅಕ್ಟೋಬರ್ ನಲ್ಲಿ ಲೆಡಿಗೋಶನ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು, ಈ ಸಂದರ್ಭ ವೈದ್ಯರು ತಾಯಿಗೆ ಹೆಣ್ಣು ಮಗುವಾಗಿದೆ ಎಂದು ತಿಳಿಸಿದ್ದರು ಎಂದು ಹೇಳಲಾಗಿತ್ತು. ನಂತರ. ಮಗುವಿಗೆ ಉಸಿರಾಟ ತೊಂದರೆ ಕಾರಣ ಐಸಿಯುನಲ್ಲಿಡಲಾಗಿತ್ತು. ಚಿಕಿತ್ಸೆ ಬಳಿಕ ಪೋಷಕರ ಕೈಗೆ ಮಗುವನ್ನು ನೀಡಲಾಗಿದೆ. ಈ ವೇಳೆ ಪರಿಶೀಲಿಸಿದಾಗ ಗಂಡು ಮಗುವನ್ನು ನೀಡಲಾಗಿತ್ತು.
ಮಗು ಬದಲಾದ ಬಗ್ಗೆ ವೈದ್ಯರ ಗಮನಕ್ಕೆ ತಂದಾಗ, ಗಂಡು ಮಗುವೇ ಜನಿಸಿದೆ. ದಾಖಲೆಯಲ್ಲಿ ಹೆಣ್ಣು ಎಂದು ತಪ್ಪಾಗಿ ನಮೂದಿಸಲಾಗಿದೆ ಎಂದು ತಿಳಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪೋಷಕರು ಹೆಣ್ಣು ಮಗುವನ್ನೇ ನೀಡಲು ಆಗ್ರಹಿಸಿದ್ದರು. ಅಲ್ಲದೇ, ಈ ಬಗ್ಗೆ ಮಂಗಳೂರಿನ ಬಂದರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಗುವಿನ ಪೋಷಕರ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮಗುವಿನ ಡಿಎನ್‌ಎ ಮಾದರಿಯನ್ನು ಪರೀಕ್ಷೆಗಾಗಿ ಹೈದರಾಬಾದ್ಗೆ ಕಳುಹಿಸಿಕೊಡಲಾಗಿತ್ತು. ಆದರೆ, ಡಿಎನ್ಎ ಪರೀಕ್ಷೆಯ ವರದಿ ಬರುವ ಮುನ್ನವೇ ಮಗು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದೆ..